ಕನ್ನಡ ವಾರ್ತೆಗಳು

ದೇರಾಜೆ ಜನ್ಮ ಶತಮಾನೋತ್ಸವ ಸಮಾರಂಭ

Pinterest LinkedIn Tumblr

deraje_prashasti_sanmana

ಮಂಗಳೂರು,ಡಿ.03 : ಯಕ್ಷಗಾನ ತಾಳಮದ್ದಳೆ ಕಲಾಲೋಕದಲ್ಲಿತಮ್ಮ ನಿತ್ಯ ನೂತನ ವಾಕ್ ವೈಖರಿಯಿಂದ, ಧ್ವನಿ, ಅರ್ಥ, ರಸ ವಿಲಾಸದಿಂದ, ವಿಶಿಷ್ಟ ರಂಗ ಪ್ರತಿಭೆಯಿಂದ ಕಂಗೊಳಿಸಿ ಇತಿಹಾಸ ಸೃಷ್ಟಿಸಿದ ದೇರಾಜೆ ಸೀತಾರಾಮಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭವು ಇತ್ತೀಚಿಗೆ ಶ್ರೀ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು.

ಕಲ್ಕೂರ ಪ್ರತಿಷ್ಠಾನ ಮಂಗಳೂರು ದೇರಾಜೆ ಸೀತಾರಾಮಯ್ಯ ಜನ್ಮ ಶತಮಾನೋತ್ಸವ ಸಮಿತಿ ಹಾಗೂ ನೆಡ್ಳೆ ನರಸಿಂಹಭಟ್ಟ ಯಕ್ಷಗಾನ ಪ್ರತಿಷ್ಠಾನದ ಸಹಯೋಗದೊಂದಿಗೆ ಜರಗಿದ ಈ ಕಾರ್ಯಕ್ರಮದಲ್ಲಿ ಸಂಸ್ಮರಣೆ – ಸನ್ಮಾನ- ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು . ಸಭಾ ಕಾರ್ಯಕ್ರಮಕ್ಕೆ ಶರವು ರಾಘವೇಂದ್ರ ಶಾಸ್ತ್ರಿಗಳು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಹಿರಿಯ ಕಲಾವಿದ ಅಗರಿ ರಘುರಾಮ ಭಾಗವತ ಉದ್ಘಾಟಿಸಿದರು.

ಪ್ರದೀಪ ಕುಮಾರ ಕಲ್ಕೂರ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂಬ್ಳೆ ಸುಂದರರಾವ್ ದೇರಾಜೆಯವರ ಸಂಸ್ಮರಣೆ ಗೈದು ದೇರಾಜೆಯವರ ಕುರಿತಾದ ಮೂರು ಕೃತಿಗಳನ್ನು ಹಿರಿಯ ಸಾಹಿತಿ ಏರ್ಯಲಕ್ಷ್ಮೀ ನಾರಾಯಣ ಆಳ್ವ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ಟರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಮೊದಲು ಅಪರಾಹ್ನ ೩ ರಿಂದ ಪಾರ್ಥಸಾರಥ್ಯ ಎಂಬ ಯಕ್ಷಗಾನ ತಾಳಮದ್ದಲೆ ಜರಗಿದ್ದು, ದೇರಾಜೆಯವರ ಅಭಿಮಾನಿಗಳು ಹಾಗೂ ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Write A Comment