ಕನ್ನಡ ವಾರ್ತೆಗಳು

ಕರಾವಳಿ ಉತ್ಸವ ಮೆರವಣಿಗೆ – ಸಾಂಸ್ಕೃತಿಕ ತಂಡಗಳ ಆಹ್ವಾನ

Pinterest LinkedIn Tumblr
pradeep_kumar_kalkura
ಮಂಗಳೂರು,ಡಿ.06: ಕರಾವಳಿ ಉತ್ಸವದ ಪ್ರಯುಕ್ತ ಡಿಸೆಂಬರ್ 19 ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ನೆಹರೂ ಮೈದಾನದಿಂದ ಹಂಪನ್‌ಕಟ್ಟೆ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ಮಂಜೇಶ್ವರ ಗೋವಿಂಧ ಪೈ ವೃತ್ತ (ನವಭಾರತ ವೃತ್ತ) ಪಿ.ವಿ.ಎಸ್. ವೃತ್ತ, ಮಹಾತ್ಮಾಗಾಂಧಿ ರಸ್ತೆ ಮಾರ್ಗವಾಗಿ ಕರಾವಳಿ ಉತ್ಸವ ಮೈದಾನ (ಮಂಗಳಾ ಕ್ರೀಡಾಂಗಣ) ವರೆಗೆ ವೈಶಿಷ್ಟಪೂರ್ಣವಾದ ಸಾಂಸ್ಕೃತಿಕ ಮೆರವಣಿಗೆ ಹಮ್ಮಿಕೊಳ್ಳಳಾಗಿದೆ.
ಹಿರಿಯ ಸಾಹಿತಿ, ಸಾಧಕರು, ಪುರಪ್ರಮುಖರ ಉಪಸ್ಥಿತಿಯಲ್ಲಿ ಮೆರವಣಿಗೆ ಹಾಗೂ ಕನ್ನಡ ಭುವನೇಶ್ವರಿ, ವಿವಿಧ ಇಲಾಖೆಯ ಸ್ತಬ್ಧ ಚಿತ್ರ ಪಾಲ್ಗೊಳಲಿದ್ದು ನಾಡುನುಡಿಯನ್ನು ಪ್ರತಿಬಿಂಬಿಸುವ ವೇಷಧಾರಿ ತಂಡಗಳು, ದಫ್, ತಾಲೀಮು, ಗೊಂಬೆ ಕುಣಿತ, ಯಕ್ಷಗಾನ, ಕೋಲಾಟ, ಮಂಗಳವಾದ್ಯ, ಹುಲಿವೇಷ, ಇತ್ಯಾದಿ ಜಿಲ್ಲೆಯನ್ನು ಪ್ರತಿಬಿಂಬಿಸುವ, ಸಾಂಸ್ಕೃತಿಕ ತಂಡಗಳಿಗೆ ಸಂಘ-ಸಂಸ್ಥೆಗಳಿಗೆ, ತಮ್ಮ ಸಾಧನೆಯನ್ನು ಸಾರ್ವಜನಿಕವಾಗಿ ಅಭಿವ್ಯಕ್ತ ಪಡಿಸಲು ವಾಣಿಜ್ಯ ಸಂಸ್ಥೆಗಳಿಗೆ ಈ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಉಸ್ತುವಾರಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಜಿಲ್ಲಾಧಿಕಾರಿ ಶ್ರೀ ಎ.ಬಿ. ಇಬ್ರಾಹಿಂ, ಜನಪ್ರತಿನಿಧಿಗಳು ಮತ್ತು ಇತರ ಆಡಳಿತಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯುವ ಕರಾವಳಿ‌ಉತ್ಸವ ಅದ್ಧೂರಿ ಹಾಗೂ ಯಶಸ್ವಿಯಾಗಿ ನೆರವೇರಲು ಡಾ. ಮೋಹನ ಆಳ್ವರ ಮಾರ್ಗದರ್ಶನದಲ್ಲಿ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಮೆರವಣಿಗೆ ಸಮಿತಿಯನ್ನು ರಚಿಸಲಾಗಿದ್ದು ಶ್ರೀ ಕೆ. ರಾಜು ಮೊಗವೀರ, ಉಪ ಆಯುಕ್ತರು ಕಂದಾಯ, ಮಂಗಳೂರು ಮಹಾನಗರ ಪಾಲಿಕೆ – ಕಾರ್ಯಾಧ್ಯಕ್ಷರು,ಶ್ರೀ ಕೆ. ಮೋಹನ ರಾವ್ ತಹಶೀಲ್ದಾರ್ ಮಂಗಳೂರು – ಸದಸ್ಯ ಕಾರ್ಯದರ್ಶಿಗಳು, ವಿವಿಧ ತುಳು, ಕೊಂಕಣಿ, ಬ್ಯಾರಿ, ಅಕಾಡೆಮಿ ಅಧ್ಯಕ್ಷರು ಹಾಗೂ ಇತರ ಸದಸ್ಯರನ್ನೊಳಗೊಂಡ ಸಮಿತಿ ಕಾರ್ಯಪ್ರವೃತ್ತವಾಗಿದೆ.
ಭಾಗವಹಿಸಲು ಇಚ್ಛಿಸುವ ತಂಡಗಳು ಡಿಸೆಂಬರ್13 , ಶನಿವಾರದೊಳಗಾಗಿ ಪ್ರತಿನಿಧಿಸುವ ಸಂಸ್ಥೆಯ ಹೆಸರು, ಪ್ರಸ್ತುತ ಪಡಿಸುವ ಸಾಂಸ್ಕೃತಿಕ ಪ್ರಕಾರ, ಸದಸ್ಯರ ಸಂಖ್ಯೆ ಇನ್ನಿತರ ವಿವರಗಳನ್ನು ಸದಸ್ಯ ಕಾರ್ಯದರ್ಶಿಗಳು ಕರಾವಳಿ ಉತ್ಸವ ಮೆರವಣಿಗೆ ಸಮಿತಿ ತಹಶೀಲ್ದಾರರ ಕಛೇರಿ, ಮಂಗಳೂರು ತಾಲೂಕು ಆಫೀಸು, ಡಿಸಿ ಆಫೀಸ್ ಸಂಕೀರ್ಣ ಮಂಗಳೂರು ಇಲ್ಲಿಗೆ ತಲುಪಿಸಬಹುದು(ಸಂಪರ್ಕ : ಬಿ. ನವನೀತ ಮಾಳವ – 9343570441)

Write A Comment