ಮಂಗಳೂರು,ಡಿ.17 : ಸ್ಪಂದನ ಟ್ರಸ್ಟ್ ಇನ್ಫೆಂಟ್ ಮೇರಿಸ್ ಕಾನ್ವೆಂಟ್ ಜೆಪ್ಪು, ಇದರ ವಾರ್ಷಿಕೋತ್ಸವ ಹಾಗೂ ಕ್ರಿಸ್ಮಸ್ ಸಮಾರಂಭವನ್ನು ವಿಜೃಭಂಣೆಯಿಂದ ನೆರವೇರಿಸಲಾಯಿತು. ಇನ್ಫೆಂಟ್ ಮೇರಿಸ್ ಶಾಲಾ ವಠಾರದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಇನ್ಫೆಂಟ್ ಮೇರಿಸ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಿಲ್ವಿಯಾ ಫೆರ್ನಾಂಡಿಸ್ ಅಧ್ಯಕ್ಷ ಸ್ಥಾನವನ್ನು ವಹಿಸಿ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿ ಸ್ವ-ಸಹಾಯದ ಮಹಿಳೆಯರನ್ನು ಹುರುದುಂಬಿಸಿ, ತಾಯಿಯ ಮಹತ್ವದ ಬಗ್ಗೆ ವಿವರಣೆಯಿತ್ತರು . ಸರ್ವರಿಗೂ ವಾರ್ಷಿಕ ಹಬ್ಬಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾನ್ಯ ಶ್ರೀ ಮಹಾಬಲ ಮಾರ್ಲ, ಮಹಾಪೌರರು ಉಪಸ್ಥಿತರಿದ್ದು, ಸಂಸ್ಥೆಯ ಕೆಲಸ ಕಾರ್ಯಗಳನ್ನು ಶ್ಲಾಘನಿಸಿದರಲ್ಲದೆ, ಜೀವನ ಮೌಲ್ಯಗಳು ಮಾನವನಿಗೆ ಎಷ್ಟು ಪ್ರಾಮುಖ್ಯ, ಒಳ್ಳೆಯ ಮನಸ್ಸಿನಿಂದ ಮಾಡಿದ ಎಲ್ಲಾ ಕೆಲಸಗಳು ದೇವರ ಕೆಲಸ, ಜೀಸಸ್ ಕ್ರೈಸ್ತರು ಮಾಡಿದ ಒಳಿತನ್ನು ಯಾರು ಅನುಕರಣೆ ಮಾಡುತಾರೋ ಅದೇ ನಿಜವಾದ ಕ್ರಿಸ್ಮಸ್. ಮಾಡುವ ಎಲ್ಲಾ ಉತ್ತಮ ಕೆಲಸ ಕಾರ್ಯಗಳಿಗೆ ಧರ್ಮ ಭೇದವಿಲ್ಲ. ಒಳಿತನ್ನು ಮಡುವುದೇ ಧರ್ಮ. ಎಂದು ತಿಳಿಸಿ ಸರ್ವರಿಗೂ ಶುಭ ಕೋರಿದರು.
ಪೂಜ್ಯನೀಯ ಗುರು ಓಸ್ವಲ್ಡ್ ಮೊಂತೇರೊ ಸಿ.ಓ.ಡಿ.ಪಿ ಸಂಸ್ಥೆಯ ನಿರ್ಧೇಶಕರು ಕ್ರಿಸ್ಮಸ್ ಸಂದೇಶವನ್ನಿತ್ತು ನೆರೆದ ಜನರಿಗೆ ಕ್ರಿಸ್ಮಸ್ ಹಬ್ಬದ ಮಹತ್ವವನ್ನು ವಿವರಿಸಿದರು. ಶ್ರೀಮತಿ ಹರಿಣಿ ಮುನ್ನಡೆ ಒಕ್ಕೂಟದ ಅಧ್ಯಕ್ಷೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಭಗಿನಿ ಇವಾಂಜಲಿನ್ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ತೀರ್ಥ ಸಮಾಜ ಕಾರ್ಯಕರ್ತರು ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಶ್ರೀಮಾನ್ ವಿಕ್ಟರ್ ವಾಸ್, ಕಾರ್ಯ ಸಂಯೋಜಕರು ವಂದಿಸಿದರು. ಸ್ವ-ಸಹಾಯ ಸಂಘದ ಪದಾಧಿಕಾರಿಗಳಾದ ಶ್ರೀಮತಿ ಶ್ಯಾಮಲ ಮತ್ತು ಶ್ರೀಮತಿ ಲಿನೆಟ್ ರವರು ಕಾರ್ಯನಿರ್ವಹಿಸಿದರು. ಸುಮಾರು 3,000 ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು, ಮಹನೀಯರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸವನ್ನು ಹಂಚಿದರು.
ಸ್ವ-ಸಹಾಯ ಸಂಘದ ಮಹಿಳಿಯರಿಗೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು. ಪಬ್ಲಿಕ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಅಂಕಗಳಿಸಿದ ಮಕ್ಕಳನ್ನು ಕೂಡಾ ಗೌರವಿಸಲಾಯಿತು.