ಕನ್ನಡ ವಾರ್ತೆಗಳು

ಮಟ್ಕಾ ಇಲ್ಲದ ಕುಂದಾಪುರ ಮಾಡಲು ಹೊರಟ ದಕ್ಷ ಯುವ ಅಧಿಕಾರಿ ಎ‌ಎಸ್ಪಿ ಅಣ್ಣಾಮಲೈ; ಮಟ್ಕಾ ಹಾಗೂ ಜುಗಾರಿಗೆ ಬ್ರೇಕ್ ಹಾಕಲಿದ್ದಾರೆಯೇ ಎ‌ಎಸ್ಪಿ ಸಾಹೆಬ್ರು..?

Pinterest LinkedIn Tumblr

ASP_Annamalai_Kundapura (1)

ಕುಂದಾಪುರ: ಕುಂದಾಪುರ ಉಪವಿಭಾಗದ ಪ್ರಭಾರ ಎ.ಎಸ್ಪಿ ಆಗಿ ಅಣ್ಣಾಮಲೈ ಅವರು ಚಾರ್ಜ್ ತೆಗೆದುಕೊಂಡಿದ್ದು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಾರ್ಕಳದ ಎ.ಎಸ್.ಪಿ ಆಗಿರುವ ಕೆ.ಅಣ್ಣಾಮಲೈ ಮೂಲತಃ ಕೊಯಮುತ್ತೂರಿನವರು. ತಂದೆ ಜೆ.ಆರ್.ಕುಪ್ಪುಸ್ವಾಮಿ ತಾಯಿ ಕೆ.ಪರಮೇಶ್ವರಿ. ಬಿ.ಇ., ಎಂ.ಬಿ.ಎ ವ್ಯಾಸಂಗ ಮಾಡಿದ ಇವರು ಮೆಕಾನಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕರಿಗೆ ಸೇವೆ ನೀಡಬೇಕು ಎನ್ನುವ ನೆಲೆಯಲ್ಲಿ ಅವರು2011 ರಲ್ಲಿ ಐಪಿ‌ಎಸ್ ಮಾಡಿದರು. ನಂತರ ಪ್ರಥಮ ಹಂತದಲ್ಲೇ ಎ.ಎಸ್.ಪಿ ಆಗಿ ಕಾರ್ಕಳಕ್ಕೆ ನಿಯೋಜನೆಗೊಂಡರು. ಇವರ ನೇತೃತ್ವದಲ್ಲಿ ಕಾರ್ಕಳದಲ್ಲಿ ಸಾಕಷ್ಟು ಪ್ರಶಂಸನಾರ್ಹ ಕಾರ್ಯಗಳು ನಡೆದಿವೆ. ಕಾರ್ಕಳ ಟೌನ್ ಠಾಣೆ ಮಾದರಿ ಠಾಣೆಯಾಗಿ ರೂಪುಗೊಳ್ಳುತ್ತಿದೆ. ಉತ್ತಮ ದಕ್ಷ ಯುವ ಅಧಿಕಾರಿ ಎನ್ನುವ ಖ್ಯಾತಿ ಪಡೆದಿದ್ದಾರೆ.

ASP_Annamalai_Kundapura (3) ASP_Annamalai_Kundapura (2) ASP_Annamalai_Kundapura

ಕುಂದಾಪುರ ತಾಲೂಕಿನಾದ್ಯಂತ ಮಟ್ಕಾ ಹಾಗೂ ಜುಗಾರಿ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದು ಅದರ ನಿಯಂತ್ರಣವನ್ನು ಮುಂದಿನ 15 ದಿನಗಳೊಳಗಾಗಿ ಮಾಡುತ್ತೇವೆ. 20 ಜನರ ಮೇಲೆ 107 ಮತ್ತು 110 ಸೆಕ್ಷನ್ ಹಾಕಿದ್ದೇವೆ. ಮತ್ತು ಮುಂದುವರಿದಲ್ಲಿ ರೌಡಿಶೀಟರ್ ಹಾಕುವ ಬಗ್ಗೆ ಚಿಂತನೆಯಿದೆ. ಅಪರಾಧ ಕ್ರತ್ಯಗಳ ತಡೆಗೆ ಪೊಲೀಸರು ಚುರುಕಾಗಬೇಕಾದ ಅಗತ್ಯವಿದ್ದು ಸಾಮಾನ್ಯ ಮನುಷ್ಯ ಠಾಣೆಗೆ ಬರುವಾಗ ಆತನ ಕೆಲಸವನ್ನು ಅತೀ ಶೀಘ್ರದಲ್ಲಿ ಮಾಡಿಕೊಡುವ ಮೂಲಕ ಅವನಿಗೆ ಪೊಲೀಸ್ ಇಲಾಖೆಯ ಬಗ್ಗೆ ನಂಬಿಕೆ ಮೂಡಿಸುವ ಕೆಲಸವಾಗಬೇಕು. ಕೋಮು ಗಲಬೆ ನಡೆಸುವರ ವಿರುದ್ದವೂ ಸೂಕ್ತ ಕ್ರಮ. ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ನಿಯಂತ್ರಣದಲ್ಲಿ ಸದಾ ಬದ್ಧರಿದ್ದೇವೆ. ಇದಕ್ಕಗಿ ಸಾರ್ವಜನಿಕರ ಸಹಕಾರ ಅಗತ್ಯ. ಈಗಾಗಲೇ ಹಲವರು ಪ್ರಾಮಾಣಿಕ ಪೊಲೀಸರಿದ್ದು ಅವರ ಕೆಲಸಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಮಾಡಬೇಕೆಂದರು.

ಈಗಾಗಲೇ ಕಾರ್ಕಳ ಟೌನ್ ಠಾಣೆಯಂತೆ ಕುಂದಾಪುರ ಠಾಣೆಯನ್ನು ಮಾದರಿಯಾಗಿ ರೂಪಿಸಲು ಪ್ರಯತ್ನಿಸಲಾಗುವುದು. ವೃತ್ತಿಯಲ್ಲಿ ರಿಸ್ಕ್‌ಗಳ ಸಹಜ ಅದಕ್ಕೆ ನಾನು ಚಿಂತೆ ಮಾಡುವುದಿಲ್ಲ. ಪ್ರಾಮಾಣಿವಾಗಿ ಜನರಿಗೆ ಸೇವೆ ನೀಡುವುದಷ್ಟೇ ನನ್ನ ಗುರಿ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕಿನಾದ್ಯಂತ ನಡೆದ ಹಲವು ಕೊಲೆ, ದರೋಡೆ ಪ್ರಕರಣಗಳ ತನಿಖೆ ಹಿನ್ನಡೆಯಲ್ಲಿ ಸಾಗುತ್ತಿರುವ ಬಗ್ಗೆ ಹಾಗೂ ಅಕ್ರಮ ಸಾರಾಯಿ ಮಾರಾಟದಂತಹ ಚಟುವಟಿಕೆಗಳ ಬಗ್ಗೆ, ಪೊಲೀಸ್ ಜನಸಂಪರ್ಕ ಸಭೆಗಳು ನಡೆಯದ ಬಗ್ಗೆ ಪತ್ರಕರ್ತರು ಅಣ್ಣಾಮಲೈ ಅವರ ಗಮನಕ್ಕೆ ತಂದರು.  ಪತ್ರಕರ್ತರು ನೀಡಿದ ಸಲಹೆಗಳನ್ನು ಸ್ವೀಕರಿಸಿದ ಅಣ್ಣಾಮಲೈ ಅವರು ಇದೆಲ್ಲದರ ಬಗ್ಗೆಯೂ ಮಾಹಿತಿ ಪಡೆದು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈಗಾಗಲೇ ಕುಂದಾಪುರ ತಾಲೂಕಿನ ಹಲವೆಡೆ ಮಟ್ಕಾ ಸೇರಿದಂತೆ ರಾತ್ರಿ ನಡೆಯುವ ಹಗಲು ನಡೆಯುವ ಇಸ್ಪಿಟ್ ಹಾಗೂ ಇತರೇ ಜುಗಾರಿ ಕ್ರತ್ಯಗಳು ರಾಜರೋಷವಾಗಿ ನಡೆಯುತ್ತಿದ್ದರೂ ಕೂಡ ಸ್ಥಳೀಯ ಎಲ್ಲಾ ಪೊಲೀಸ್ ಇಲಾಖೆ ಮೌನ ವಹಿಸಿರುವ ಕಾರಣ ಮಾತ್ರ ನಿಗೂಢವಾಗಿದೆ. ಉತ್ಸಾಹಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಂದದರೂ ಇದಕ್ಕೆಲ್ಲಾ ಕಡಿವಾಣ ಬೀಳುವುದೇ ಕಾದು ನೋಡಬೇಕಾಗಿದೆ.

 

Write A Comment