ಪಡುಬಿದ್ರಿ: ಪ್ರಿಯಕರೆಯನ್ನು ಇರಿದು ಕೊಂದ ವ್ಯಕ್ತಿ ಬಳಿಕ ತಾನೂ ಅಂಗಡಿಯ ಮಾಡಿಗೆ ನೇಣು ಹಾಕಿಕೊಂಡ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಮೃತ ಯುವಕನನ್ನು ಕೇರಿ ನಿವಾಸಿ ನವೀನ ದೇವಾಡಿಗ (43)ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು (40) ಎಂದು ಗುರುತಿಸಲಾಗಿದೆ.
ನವೀನ ತಾರಾಳನ್ನು ಕಾರ್ಪೊರೇಶನ್ ಬ್ಯಾಂಕ್ ಎದುರಿನ ಅಂಗಡಿಯೊಂದರ ಹಿಂದೆ ಕದೆದುಕೊಂಡು ಹೋಗಿ ಆಕೆಗೆ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೀನ್ ಚಾಲಕ ವೃತ್ತಿಯವನಾಗಿದ್ದು, ಸುಪರ್ ಮಾರ್ಕೆಟಿನಲ್ಲಿ ಉದ್ಯೋಗದಲ್ಲಿದ್ದ ತಾರಾಳನ್ನು ಪ್ರೀತಿಸುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ತಾರ ಈ ಹಿಂದೆ ಮದುವೆಯಾಗಿ ವಿಧವೆಯಾಗಿದ್ದು ಬಳಿಕ ತನ್ನ ಮಕ್ಕಳೊಂದಿಗೆ ತವರು ಮನೆ ಕೆಂಬೆಟ್ಟುವಿನಲ್ಲಿ ವಾಸವಿದ್ದಳು. ಈ ವೇಳೆ ಪರಿಚಿತನಾದ ನವೀನ ತಾನು ನಿನ್ನ ಮದುವೆಯಾಗುವುದಾಗಿ ಪೀಡಿಸತೊಡಗಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ತಾರಾ ಮತ್ತು ನವೀನ್ ಮದುವೆಗೆ ಮುನ್ನ ಪರಸ್ಪರರನ್ನು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರೀತಿ ನಿಜ ಆದರೇ ತಾರ ಇದಕ್ಕೆ ಒಪ್ಪಿಲ್ಲ ಎನ್ನುವುದು ತಾರ ಮನೆಯವರ ವಾದವಾಗಿದೆ.
ನವೀನ ತಾರನನ್ನೌ ಕೊಂದಿದ್ದಾದರೂ ಯಾಕೆ ಎನ್ನುವುದು ಇನ್ನೂ ನಿಗೂಢವಾಗಿದೆ. ಪ್ರೀತಿಸುತ್ತಿದ್ದ ಪ್ರಿಯತಮಯೆನ್ನು ಬರ್ಬರವಾಗಿ ಕೊಂದ ನವೀನನೂ ಕೂಡ ಸ್ಥಳದ;ಲ್ಲಿಯೇ ನೇಣು ಹಕಿಕೊಂಡಿರುವ ಹಿಂದೆ ನಿಗೂಢ ಕಾರಣವಿರಬೇಕೆನ್ನುವುದು ಸ್ಥಳಿಯರ ಅಭಿಪ್ರಾಯವಾಗಿದ್ದು ಪೊಲೀಸರು ಇದರ ಬಗ್ಗೆ ತನಿಖೆ ನಡೆಸಬೇಕಗಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.