ಮಂಗಳೂರು,ಡಿ25 ಯೇಸು ಕ್ರಿಸ್ತನ ಜನ್ಮ ದಿನ ಪ್ರಯುಕ್ತ ಡಿ. 24ರಂದು ರಾತ್ರಿ ಚರ್ಚ್‌ಗಳಲ್ಲಿ ಬಲಿ ಪೂಜೆ ನಡೆಸಲಾಗುತ್ತದೆ ಈ ಸಂಧರ್ಭ್ದಲ್ಲಿ ಕ್ರೈಸ್ತ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತನ್ನ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಂಭ್ರಮ ಸಡಗರದಿಂದ ಈ ಕ್ರಿಸ್ ಮಸ್ ಹಬ್ಬವನ್ನು ಆಚರಿಸುತ್ತಾರೆ.
ಮಂಗಳೂರಿನ ರೊಜಾರಿಯೋ ಕೆಥೆಡ್ರಲ್ ಚರ್ಚ್, ಉರ್ವ ಚರ್ಚ್ , ಮಿಲಾಗ್ರೀಸ್ ಚರ್ಚ್ , ಬೆಂದೂವೆಲ್ ಚರ್ಚ್ ಗಳಲ್ಲಿ ಬಲಿಪೂಜೆಯನ್ನು ಧರ್ಮಪ್ರಾಂತ್ಯದ ಬಿಷಪ್ ಗಳ ನೇತೃತ್ವದಲ್ಲಿ ನಡೆಸಲಾಯಿತು. ಕ್ರಿಸ್‌ಮಸ್ ಗೀತೆ ‘ಕ್ಯಾರಲ್’ಗಳ ಗಾಯನಗಳು ನಡೆಯಿತು. ಬಲಿ ಪೂಜೆಯ ಬಳಿಕ ಹಬ್ಬ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಮಂಗಳೂರಿನ ಪ್ರಮುಖ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ಗಳ ಆವರಣದಲ್ಲಿ ಮತ್ತು ಕ್ರೈಸ್ತರ ಮನೆಗಳ ಆವರಣದಲ್ಲಿ ಗೋದಲಿಗಳನ್ನು (ಕ್ರಿಬ್) ನಿರ್ಮಿಸಲಾಗಿತ್ತು. ಕ್ರಿಸ್ಮಸ್‌ನ ವಿಶೇಷ ತಿಂಡಿ ತಿನಿಸು ‘ಕುಸ್ವಾರ್’ ವಿತರಣೆ ನಡೆಯಿತು.