ವರದಿ : ಈಶ್ವರ ಎಂ. ಐಲ್ / ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಬಿಲ್ಲವರ ಅಸೋಷಿಯೇಶನ್ ಇದರ ಯುವ ಅಭ್ಯುದಯ ಸಮಿತಿಯ ವತಿಯಿಂದ ಕೋಟಿ-ಚೆನ್ನಯ ಕ್ರೀಡಾ ಕೂಟವು ಡಿ. 25ರಂದು ಕಾಂದಿವಲಿ ಪೂರ್ವ ಸಮಾತಾ ನಗರದ ಮೈದಾನದಲ್ಲಿ ನಡೆಯಿತು.
ಈ ಸಮಾರಂಭಕ್ಕೆ ಆಗಮಿಸಿದ್ದ ಓಲಿಂಪಿಯನ್ ಸಹನಾ ಕುಮಾರಿ ಅವರನ್ನು ಅಸೋಷಿಯೇಶನ್ ನ ಗೌರವ ಅಧ್ಯಕ್ಷ ಜಯ ಸಿ. ಸುವರ್ಣ ಗೌರವಿಸಿದರು. ನಂತರ ಮಾತನಾಡಿದ ಅವರು ತನ್ನ ಕ್ರೀಡಾ ಬದುಕಿಗೆ ಸಹಕರಿಸಿದವರನ್ನು ನೆನಪಿಸಿಕೊಂಡರು.
ಜಯ ಸಿ ಸುವರ್ಣರು ಮಾತನಾಡುತ್ತ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಮುದಾಯದ ಪ್ರತಿಭೆ ಬೆಳಕಿಗೆ ಬಂದಿರುವುದು ಸಮಾಜಕ್ಕೆ ಗೌರವ ತಂದಿದೆ ಎಂದರು. ಸಂಸದ ಬಿ. ಕೆ. ಹರಿಪ್ರಸಾದ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಲ್ಲವರ ಅಸೋಷಿಯೇಶನ್ ಇದರ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರು ಮಾತನಾಡುತ್ತಾ ಕೋಟಿ ಚೆನ್ನಯರ ಆದರ್ಶವನ್ನು ಇಂದಿನ ಯುವ ಪೀಳಿಗೆಯು ಪಾಲಿಸಬೇಕು, ಎಂದರು.
ವೇದಿಕೆಯಲ್ಲಿ ಬಿಲ್ಲವ ಸಮಾಜದ ಅನೇಕ ಗಣ್ಯರು, ಬಿಲ್ಲವರ ಅಸೋಷಿಯೇಶನ್ ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಕೋಟ್ಯಾನ್ ಸ್ವಾಗತಿಸಿದರು. ಸದಾಶಿವ ಕರ್ಕೇರ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.