ಮಂಗಳೂರು,ಡಿ.28 : ಬೆಂಗರೆ ವಿದ್ಯಾರ್ಥಿ ಸಂಘ, ಯುವಕ ಮಂಡಲ (ರಿ), ಮಹಾಜನ ಸಭಾ ಬೆಂಗರೆ (ರಿ), ಇವರ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ರವಿವಾರ ಬೆಳಿಗ್ಗೆ ಬೆಂಗರೆ ಫೆರಿ ಸರ್ವೀಸ್ ಹತ್ತಿರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಭಾರತದ ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತ ಅಭಿಯಾನದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡು “ಆರೋಗ್ಯ ಪೂರ್ಣ ದೇಶ”ವನ್ನು ನಿರ್ಮಿಸುವ ಉದ್ದೇಶದಂತೆ ಬೆಂಗರೆ ಪ್ರದೇಶವನ್ನು ಮಾರಕ ಸಾಂಕ್ರಮಿಕ ರೋಗ ಮುಕ್ತಗೊಳಿಸಿ “ಸ್ವಚ್ಚ ಸುಂದರ ಆರೋಗ್ಯವಂತ ಗ್ರಾಮ”ವನ್ನಾಗಿ ನಿರ್ಮಿಸುವ ಸಲುವಾಗಿ ಈ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬೆಂಗರೆ ಪರಿಸರದಲ್ಲಿ ಮಲೇರಿಯಾ, ಡೆಂಗ್ಯೂ, ಇಲಿಜ್ವರ, ಕಾಲುಬಾಯಿ ರೋಗ ಹಾಗೂ ಇನ್ನಿತರ ಮಾರಕ ಸಾಂಕ್ರಮಿಕ ರೋಗಗಳಿಂದಾಗಿ ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಸಾಂಕ್ರಮಿಕ ರೋಗದಿಂದ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದರೆ ತುಂಬ ಕಷ್ಟನಷ್ಟವನ್ನು ಅನುಭವಿಸ ಬೇಕಾಗುತ್ತದೆ. ನಗರಗಳು ಅಭಿವೃದ್ಧಿ ಪಥದಲ್ಲಿರುವಾಗ ಜನಸಂಖ್ಯಾ ಸ್ಫೋಟದಿಂದ ಮೂಲಭೂತ ಸೌಕರ್ಯ ನಿರ್ಮಿಸುವುದು ಮಾತ್ರವಲ್ಲದೇ ಕೈಗಾರಿಕಾ ತ್ಯಾಜ್ಯಗಳು, ನಾಗರಿಕರು ತ್ಯಜಿಸಿದ ಕಸದ ಬೃಹತ್ ವಿಲೇವಾರಿ ಕಾರ್ಯ ಕೈಗೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಭಾಗಿಯಾಗದೆ ಇರುವುದರಿಂದ ಸಮಸೈಯುಂಟಗುತ್ತದೆ. ಹೀಗೆ ತ್ಯಾಜ್ಯಗಳು ಶೇಖರಣೆಯಾಗುತ್ತಾ ಸಾಂಕ್ರಮಿಕ ರೋಗದ ವಾಸಸ್ಥಳವಾಗಿ ನಾಗರೀಕರ ಆರೋಗ್ಯಕ್ಕೆ ದೊಡ್ಡ ಸಾವಾಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಸ್ವಚ್ಚ – ಸುಂದರ – ಆರೋಗ್ಯ ಪೂರ್ಣ ಭಾರತ ಕಟ್ಟಲು ಕೈಜೋಡಿಸಬೇಕು ಎಂದು ಹೇಳಿದರು.