ಕನ್ನಡ ವಾರ್ತೆಗಳು

ಮದುವೆಗೆ ಮುನ್ನ ವಧು ಪ್ರಿಯಕರನೊಂದಿಗೆ ಪರಾರಿ

Pinterest LinkedIn Tumblr

sulia_krapa_photo_a

ಸುಳ್ಯ,ಡಿ.30 : ಮದುವೆಗೆ ಕೆಲವೇ ಗಂಟೆ ಮೊದಲು ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ವಿವಾಹ ಸ್ಥಗಿತಗೊಂಡ ಘಟನೆ ಪಂಜ ದಲ್ಲಿ ನಡೆದಿದೆ. ಕಡಬದಲ್ಲಿ ವೈದ್ಯರಾಗಿರುವ ಪಂಜ ದೊಡ್ಡಮನೆಯ ಡಾ.ದೇವಿಪ್ರಸಾದ್‍ರವರ ವಿವಾಹವು ಬೆಂಗಳೂರಿನಲ್ಲಿ ವೈದ್ಯೆಯಾಗಿರುವ ಬಿಳಿನೆಲೆ ಗ್ರಾಮದ ಕಳಿಗೆಯ ಡಾ.ಕೃಪಾ ಎಂಬವರೊಂದಿಗೆ ಪಂಜ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ನಡೆಯಬೇಕಿತ್ತು.

sulia_krapa_photo

ಇವರ ವಿವಾಹ ನಿಶ್ಚಿತಾರ್ಥವು ಕೆಲವು ತಿಂಗಳ ಹಿಂದೆ ನಡೆದಿತ್ತು. ಭಾನುವಾರ ಎರಡೂ ಮನೆಗಳಲ್ಲಿ ಮದರಂಗಿ ಶಾಸ್ತ್ರವೂ ನಡೆದಿತ್ತು. ಸೋಮವಾರ ನಸುಕಿನ ವೇಳೆ ವಧು ಮನೆಯಿಂದ ನಾಪತ್ತೆಯಾದರೆನ್ನಲಾಗಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಮಾಹಿತಿ ಮನೆಯವರಿಗೆ ಸಿಕ್ಕಿದ್ದು, ಮುಂಜಾನೆ ವೇಳೆ ವರನ ಮನೆಯವರಿಗೆ ಮಾಹಿತಿ ತಲುಪಿತು. ಅದಾಗಲೇ ಪಂಜದಲ್ಲಿ ಮದುವೆಗೆ ಸಂಪೂರ್ಣ ಸಿದ್ಧತೆ ನಡೆದಿತ್ತು. ದೇವಸ್ಥಾನದಲ್ಲಿ ಸುಮಾರು 2000 ಮಂದಿಗೆ ಭೋಜನದ ತಯಾರಿಯೂ ಆರಂಭಗೊಂಡಿತ್ತು. ತಯಾರಿಸಿದ ಭೋಜನವನ್ನು ಸ್ಥಳೀಯ ಶಾಲೆಗಳಿಗೆ ವಿತರಿಸಲಾಯಿತೆಂದು ತಿಳಿದುಬಂದಿದೆ.

ಕೃಪಾ ಹಾಗೂ ಆಂಧ್ರ ಮೂಲದ ಯುವಕನೊಬ್ಬ ಪರಸ್ಪರ ಪ್ರೀತಿಸುತ್ತಿದ್ದು, ಆತ ಹಾಗೂ ಆತನ ಕಡೆಯವರು ಭಾನುವಾರ ಬಂದಿದ್ದರೆಂದೂ ಈ ವೇಳೆ ಗಣ್ಯರ ಸಮ್ಮುಖ ಮಾತುಕತೆ ನಡೆದು ಆಕೆಯ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಲಾಗಿತ್ತೆಂದು ಹೇಳಲಾಗುತ್ತಿದೆ.

Write A Comment