ಕನ್ನಡ ವಾರ್ತೆಗಳು

ಆಯುಕ್ತರ ನೇಮಕ ವಿಳಂಬ: ಮುಂದುವರೆಯಲಿದೆ ಹೋರಾಟ

Pinterest LinkedIn Tumblr

corration_meet_photo_1

ಮಂಗಳೂರು,ಡಿ.30: ಮಹಾನಗರ ಪಾಲಿಕೆಗೆ ಆಯುಕ್ತರ ನೇಮಕವಾಗದ ಹಿನ್ನೆಲೆಯಲ್ಲಿ ಹಿಂದಿನ ಸಾಮಾನ್ಯ ಸಭೆಯಲ್ಲಿ ಪ್ರತಿಭಟಿಸಿದ್ದ ವಿರೋಧ ಪಕ್ಷ ಬಿಜೆಪಿಯ ಸದಸ್ಯರು, ನಿನ್ನೆ ಪಾಲಿಕೆಯಲ್ಲಿ ನಡೆದ ಸಭೆಯಲ್ಲೂ ಆಯುಕ್ತರ ನೇಮಕ ಪ್ರಕ್ರಿಯೆ ಕುರಿತು ಪ್ರಸ್ತಾಪಿಸಿ ತಗಾದೆ ತೆಗೆದರು. ಈ ವೇಳೆ ಬಿಜೆಪಿಯ ಸದಸ್ಯರು ಆಯುಕ್ತರ ನೇಮಕವಾಗುವವರೆಗೂ ಪ್ರತಿಭಟನೆ, ಹೋರಾಟ ಮುಂದುವರೆಸುವುದಾಗಿ ಪ್ರೇಮನಾಥ ಶೆಟ್ಟಿ ಹೇಳಿದ್ದಾರೆ.

corration_meet_photo_2

ಸಭೆಯಲ್ಲಿ ತಮ್ಮ ಅಹವಾಲು ತೋಡಿಕೊಂಡ ವಿರೋಧ ಪಕ್ಷದ ಸದಸ್ಯ ಸುಧೀರ್ ಕಣ್ಣೂರು, ಹಿಂದಿನ ಸಭೆಯಲ್ಲಿ ಪ್ರತಿಭಟಿಸಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು ಆಯುಕ್ತರ ನೇಮಕ ಸದ್ಯದಲ್ಲಿ ಆಗಲಿದೆ ಎಂದು ಭರವಸೆ ನೀಡಿದ್ದರು. ಅಲ್ಲದೆ ಈ ಹಿಂದೆ ಮುಖ್ಯಮಂತ್ರಿಗಳು ಕೂಡಾ ಆಯುಕ್ತರ ನೇಮಕದ ಕುರಿತು ಭರವಸೆ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ಆಯುಕ್ತರ ನೇಮಕವಾಗಿಲ್ಲ. ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ಧ ಪ್ರತಿಭಟಿಸಿದರೂ ಪ್ರಯೋಜನವಿಲ್ಲ. ಆಯುಕ್ತರ ನೇಮಕ ಪ್ರಕ್ರಿಯೆಗೆ ಆಡಳಿತ ಪಕ್ಷದ ಶಾಸಕರಲ್ಲೇ ಇರುವ ಗ್ರೂಪಿಸಂ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.

corration_meet_photo_3

ಪೂರಕವಾಗಿ ಉತ್ತರಿಸಿದ ಮೇಯರ್ ಮಹಾಬಲ ಮಾರ್ಲ, ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿ ದ್ದಾರೆ ಎಂದ ಮೇಲೆ ನಾನು ಹೇಳುವುದೇನು? ಆಯುಕ್ತರ ನೇಮಕ ಪ್ರಕ್ರಿಯೆ ಕುರಿತು ಅವರ ಗಮನಕ್ಕೆ ತರಬಹುದು ಅಷ್ಟೇ. ಈ ಬಗ್ಗೆ ನಾನೇನು ಮಾಡಲು ಸಾಧ್ಯವಿಲ್ಲ. ಅವರನ್ನು ಒತ್ತಾಯಪೂರ್ವಕವಾಗಿ ಕರೆತರಲು ಸಾಧ್ಯವಿಲ್ಲ. ಪೂರ್ಣಾವಧಿ ಆಯುಕ್ತರ ನೇಮಕ ಪ್ರಕ್ರಿಯೆ ಇನ್ನು ಸದ್ಯದಲ್ಲೇ ಆಗಲಿದೆ. ಜನವರಿ ತಿಂಗಳೊಳಗಾಗಿ ಆಯುಕ್ತರು ಬರಲಿದ್ದಾರೆ ಎಂದು ಹೇಳಿದರು.

corration_meet_photo_4

ಸಭೆಯ ವೇದಿಕೆಯಲ್ಲಿ ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್.ಡಿ.ಕೆ ಮುಂತಾದವರು ಉಪಸ್ಥಿತರಿದ್ದರು.

Write A Comment