ಕನ್ನಡ ವಾರ್ತೆಗಳು

ಮೂಡುಬಿದಿರೆಯ ಯುವಕ ಗೋವಾದಲ್ಲಿ ಮೃತ್ಯು

Pinterest LinkedIn Tumblr

mudabidere_goa_died_boy

ಮೂಡುಬಿದಿರೆ, ಡಿ.30 : ಕಲ್ಲಬೆಟ್ಟುವಿನ ಮಧುಸೂದನ ನಾಯಕ್ (25) ಎಂಬ ಯುವಕ ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಲ್ಲಬೆಟ್ಟು ನಿವಾಸಿ ಸರ್ವೋತ್ತಮ ನಾಯಕ್, ಶಾರದಾ ಪೈ ದಂಪತಿಯ ಪುತ್ರ. ಗೋವಾದ ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದರು.

ಡಿ.18ರಂದು ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಸೂದನ ನಾಯಕ್ ಕಲ್ಲಬೆಟ್ಟು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

Write A Comment