ಮಂಗಳೂರು,ಡಿ.30 : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರ ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದಲ್ಲಿ ಸೋಮವಾರ ಎಸ್ .ಡಿ. ಎಮ್ ಕಾಲೇಜಿನ ಸಭಾಂಗಣದಲ್ಲಿ ” ಭಜನೆಯ ಮಾಡಿರೊ “ಬಹು ಚಂದ” ಎಂಬ ಬಹುಭಾಷಾ ಭಜನಾವಳಿ ಸೇವಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರುಗಳಾದ ಶ್ರೀ ಟಿ.ಕೃಷ್ಣ ಮೂರ್ತಿ ರಾವ್ ಮತ್ತು ಶ್ರೀಮತಿ ವೀಣಾ ಕೃ.ರಾವ್ ದಂಪತಿಗಳಿಗೆ “ಆದರ್ಶ ದಾಂಪತ್ಯ ಸವಿಜೀವನ ಪುರಸ್ಕಾರ” ವನ್ನು ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷರುಗಳಾದ ಡಾ ದೇವರಾಜ್ ಕೆ, ಹೆಚ್ ಜನಾರ್ದನ ಹಂದ್, ಹಾಗೂ ಪ್ರದೀಪ ಕುಮಾರ್ ಕಲ್ಕೂರರೊಂದಿಗೆ ,ಡಾ ಪ್ರಭಾಕರ ಜೋಷಿ ,ಕೆ ಜಿ ರವೇಶ್ ರಾವ್, ಕೆ ಪಿ ಸೀತಾರಾಮ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭವು ಪೂರ್ಣಾ ಪ್ರಮಾಣದಲ್ಲಿ ಸಂಪನ್ನಗೊಂಡಿತು. ಶ್ರೀಮತಿ ಮಾಧುರಿ ಶ್ರೀರಾಮ್ ಶ್ರೀಮತಿ ಜಯಶ್ರೀ ಆರವಿಂದ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.