ವರದಿ : ಈಶ್ವರ ಎಂ. ಐಲ್ / ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ವರ್ಲಿಯ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ರಮೇಶ್ ಗುರುಸ್ವಾಮಿ ಸ್ಥಾಪಿಸಿರುವ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಫೌಂಡೇಶನ್ ವತಿಯಿಂದ 21ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಅಶೋಕ್ ಕೊಡ್ಯಡ್ಕ ನಿರ್ಮಿಸಿದ ಮಂಟಪದಲ್ಲಿ ನೆರವೇರಿತು.
ಧಾರ್ಮಿಕ ಸಭಾಕಾರ್ಯಕ್ರಮವು ಮನಿಪೋಲ್ಡ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಕಾಂಚನ್ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದರು. ಬಂಟರ ಸಂಘದ ಸ್ಥಳೀಯ ಸಮಿತಿಯ ವಿನೋದಾ ಡಿ. ಶೆಟ್ಟಿ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರೂ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಧಾಕರ ಎನ್ ಶೆಟ್ಟಿ, ರತ್ನಾಕರ ಜಿ. ಶೆಟ್ಟಿ, ಹರೀಶ್ ಪೆರ್ಗಡೆ ಮೊದಲಾದವರನ್ನು ಸನ್ಮಾನಿಸಲಾಯಿತು.
ಕೇದಗೆ ಸುರೇಸ್ ಶೆಟ್ಟಿ ಸ್ವಾಗತಿಸಿದರು. ರಘುನಾಥ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಅರುಣ್ ಆಳ್ವ ಅಭಾರ ಮನ್ನಿಸಿದರು.
ಬಂಟ್ವಾಳದ ಶ್ರೀ ಮಾತಾ ಲಕ್ಷಣಿ ವೃದ್ಧಾಶ್ರಮಕ್ಕೆ ಫೌಂಡೇಶನ್ ವತಿಯಿಂದ ಒಂದು ಲಕ್ಷ ಒಂಬತ್ತು ಸಾವಿರ ರೂ. ದೇಣಿಗೆ ನೀಡಲಾಯಿತು.