ಕನ್ನಡ ವಾರ್ತೆಗಳು

ಹೇರಿಕುದ್ರು : ಅಕ್ರಮ ಮರಳು ದಂಧೆಗೆ ಎಸಿ ಬ್ರೇಕ್ : ಏಳು ಲಾರಿ ವಶಕ್ಕೆ

Pinterest LinkedIn Tumblr

ಕುಂದಾಪುರ: ನಿರಂತರವಾಗಿ ಅಕ್ರಮ ಮರಳುಗಾರಿಕೆಯಿಂದ ಬಸವಳಿದು ಹೋಗುತ್ತಿರುವ ತಾಲೂಕಿನ ಆನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕುದ್ರು ಪ್ರದೇಶಕ್ಕೆ ಕುಂದಾಪುರ ಉಪವಿಭಾಗಾಧಿಕಾರಿಗಳು ದಾಳಿ ನಡೆಸಿ ಮರಳು ಸಾಗಾಟಕ್ಕೆ ಯತ್ನಿಸುತ್ತಿದ್ದ ಏಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.

Herikudru_Illeagle_Sand Mining Herikudru_Illeagle_Sand Mining (1)

ಹೇರಿಕುದ್ರು ನದೀ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದರಿಂದ ರಿಂಗ್ ರೋಡ್ ಸಂಪೂರ್ಣ ಹಾನಿಗೀಡಾಗಿದ್ದಲ್ಲದೇ ಕೆಲವು ಕಡೆಗಳಲ್ಲಿ ರಿಂಗ್ ರಸ್ತೆಯಲ್ಲಿದ್ದ ಡಾಮರನ್ನೇ ಕಿತ್ತು ಮರಳುಗಾರಿಕೆ ನಡೆಸಲು ಬಳಸಿಕೊಳ್ಳಲಾಗಿತ್ತುನ ಅಲದೇ ಮರುಳುಗಾರಿಕೆ ಮುಂದುವರೆದಲ್ಲಿ ಭೂ ಕೊರೆತ ಹಾಗೂ ಕಾಂಡ್ಲವನ ನಾಶದ ಭೀತಿಯ ಬಗ್ಗೆಯೂ ಭೀತಿಯಿತ್ತು.

ಕೆಲವು ತಿಂಗಳ ಹಿಂದೆ ಕಾರ್ವಿಕೇರಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂದಿಸಿ ಪ್ರತಿಭಟನೆ ನಡೆಸಲಾಗಿದ್ದರ ಬೆನ್ನಿಗೇ ಪಂಚಗಂಗಾವಳಿ ನದೀ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದನ್ನು ವಿರೋಧೀಸಿದ ಕೊಂಕಣ ಖಾರ್ವಿ ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ಸೋಮವಾರ ಖಾರ್ವಿಕೇರಿ ಸುತ್ತಲಿನ ಮರಳು ಎತ್ತುವ ದಕ್ಕೆಗಳನ್ನು ಪೊಲೀಸ್ ಭದ್ರೆತೆಯಲ್ಲಿ ತೆರವುಗೊಳಿಸಲಾಗಿತ್ತು. ಬುಧವಾರ ಜಿಲ್ಲಾಧಿಕಾರಿಗಳು ಕುಂದಾಫುರ ತಾಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭ ಹೇರಿಕುದ್ರು ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.

ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಂತೆ ಉಪವಿಭಾಗಾಧಿಕಾರಿಗಳಿಗೆ ಹೇರಿಕುದ್ರು ಮರಳುಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ದಾಳಿ ನಡೆಸಲು ನೀಡಿದ ಸೂಚನೆಯಂತೆ ಎಸಿ ಚಾರುಲತಾ ಸೋಮಲ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಏಳು ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಲಾರಿಗಳ ಕೀಲಿ ಕೈ ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಯೊಂದು ಲಾರಿಗೂ ಟನ್ ಒಂದಕ್ಕೆ ಮೂವತ್ತು ಸಾವಿರ ರೂಪಾಯಿಗಳಂತೆ ದಂಡ ವಿಧಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Write A Comment