ಕುಂದಾಪುರ: ಅಂಪಾರು ವ್ಯವಸಾಯ ಸೇವಾ ಸಹಕಾರಿ ಸಂಘವನ್ನು ಬಿಜೆಪಿ ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಭಾನುವಾರ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಪೂರ್ಣ ಹನ್ನೊಂದು ಸ್ಥಾನವನ್ನೂ ತನ್ನ ಮಡಿಲಿಗಿಳಿಸಿಕೊಂಡ ಬಿಜೆಪಿ ಕಾಂಗ್ರೆಸ್ಸನ್ನು ಸೊಸೈಟಿಯಿಂದ ಹೊರಗಿಟ್ಟಿದೆ. ಆ ಮೂಲಕ ಈ ಹಿಂದೆ ಇಂದ ಬಿಜೆಪಿ ನೇತೃತ್ವದ ಆಡಳಿತವನ್ನು ಉಳಿಸಿಕೊಳ್ಳುವುದರ ಜೊತೆಗೆ ಸಂಪೂರ್ಣ ಅಧಿಕಾರ ಹಿಡಿಯುವಲ್ಲಿ ಎ. ಬಾಲಕೃಷ್ಣ ಶೆಟ್ಟಿ ನೇತೃತ್ವದ ಬಿಜೆಪಿ ಯಶಸ್ವಿಯಾಗಿದೆ.
ಆ ಮೂಲಕ ಬಿಜೆಪಿಯ ಅಭ್ಯರ್ಥಿಗಳಾದ ಸಿ. ಎ. ಬ್ಯಾಂಕಿನ ಮಾಜೀ ಅಧ್ಯಕ್ಷರಾದ ಗೋಪಾಲಕೃಷ್ಣ ಕಿಣಿ ಮತ್ತು ಮೋಹನ್ ವೈದ್ಯ, ಮಾಜೀ ಸೊಸೈಟಿ ನಿರ್ದೇಶಕ ಕೆ. ಅಶೋಕ್, ಗೋವಿಂದ ಶೆಟ್ಟಿ, ನಿವೃತ್ತ ಮುಖ್ಯೋಪಾದ್ಯಾಯರಾದ ರತ್ನಾಕರ ಶೆಟ್ಟಿ ಮತ್ತು ಹೆರಿಯ ಕುಲಾಲ್, ಮಾಜಿ ಪಿ.ಡಿ.ಓ. ಬೋಜರಾಜ ಶೆಟ್ಟಿ, ಅಡಳ್ಳಿ ಸತೀಶ್ ಕುಮಾರ್ ಶೆಟ್ಟಿ, ಭಾರತಿ ಶೆಟ್ಟಿ, ಕಾವೇರಿ ಪ್ರಸಾದ್, ಬಸವ ನಾಯ್ಕ್ ಆಯ್ಕೆಯಾಗಿದ್ದಾರೆ.
ಆ ಮೂಲಕ ತಾ,ಪಂ ಸದಸ್ಯ ಪ್ರದೀಪ್ ಕುಮಾರ್ ಶೆಟ್ಟಿ, ಮಾಜೀ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣಪಯ್ಯ ಶೆಟ್ಟಿ, ಕಿರಣ್ ಹೆಗ್ಡೆ, ರತ್ನಾವತಿ ಶೆಟ್ಟಿ, ಬಲಾಡಿ ಸಂತೋಷ್ ಶೆಟ್ಟಿ, ಮಾಜೀ ಪಂಚಾಯಿತಿ ಉಪಾಧ್ಯಕ್ಷ ಗಣೇಶ್ ಮೊಗವೀರ, ಸೊಸೈಟಿಯ ಮಾಜೀ ಮೆನೇಜರ್ ಟಿ. ಜಗನ್ನಾಥ ಶೆಟ್ಟಿ ಮೊದಲಾದ ಕಾಂಗ್ರೆಸ್ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.
ಕಳೆದ ಬಾರಿ ಸೊಸೈಟಿಯಲ್ಲಿ 9 ಸ್ಥಾನಗಳಿದ್ದು ಅದರಲ್ಲಿ ಐದು ಸ್ಥಾನ ಬಿಜೆಪಿ ಹಾಗೂ ನಾಲ್ಕು ಸ್ಥಾನ ಕಾಂಗ್ರೆಸ್ ಹೊಂದಿತ್ತು. ಬಿಜೆಪಿ ಆಡಳಿತದಲ್ಲಿತ್ತು. ಇದೀಗ ಸಂಪೂರ್ಣ ಹನ್ನೊಂದು ಸ್ಥಾನಗಳು ಬಿಜೆಪಿ ಪಾಲಾಗಿದೆ.