ಮೂಡಬಿದಿರೆ:ಜ. 19: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ,ಕರ್ನಾಟಕ ಸರಕಾರ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ 75 ನೇ ಅಖಿಲ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಮೂರನೇ ದಿನದ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾನಿಲಯ ಮುಂಚೂಣಿಯ ಪಥದಲ್ಲಿ ನಡೆಯುತ್ತಿದೆ.ನಿನ್ನೆ ನಡೆದ 5000 ಮೀ ( 17.೦೦ ಸೆಕೆಂಡಲ್ಲಿ) ತಲುಪಿ ದಾಖಲೆಯನ್ನು ಸೃಷ್ಟಿಸಿದ ಜಾದವ್ ಸಂಜೀವಿನಿ ಇಂದು ನಡೆದ 10.000 ಮೀ ಓಟವನ್ನು ಕೇವಲ 34:58 ಸೆಕೆಂಡಲ್ಲಿ ತಲುಪಿ ಕೂಟ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದರು. ಇವರಿಗೆ ಆಳ್ವಾಸ್ ಸಂಸ್ಥೆಯಿಂದ 25.೦೦೦ ನಗದು ಬಹುಮಾನವನ್ನು ನೀಡಿ ಗೌರವಿಸಿದರು.
ಜಾವಲಿನ್ನಲ್ಲಿ ರಜತ ತಂದ ರಶ್ಮಿ:
ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ೭೫ನೇ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಅತ್ಲೆಟಿಕ್ ಚಾಂಪಿಯನ್ಶಿಪ್ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಗರಿಷ್ಟ ಅಂಕಗಳೊಂದಿಗೆ ಮುಂದಿರುವ ಮಂಗಳೂರು ಯೂನಿವರ್ಸಿಟಿ ಪದಕಗಳತ್ತ ಮುನ್ನುಗ್ಗುತ್ತಿದೆ. ಮೂರನೇ ದಿನದಲ್ಲಿ ಆಳ್ವಾಸ್ನ ರಶ್ಮಿ ಕೆ. ಜಾವಲಿನ್ ತ್ರೋನಲ್ಲಿ ಬೆಳ್ಳಿ ಪದಕ ಪಡೆದು ಆಳ್ವಾಸ್ಗೆ ಹೆಸರು ತಂದಿದ್ದಾರೆ. 46.05 ಮೀಟರ್ನಷ್ಟು ದೂರ ಜಾವಲಿನ್ನನ್ನು ಎಸೆದು ಎರಡನೇ ಸ್ಥಾನವನ್ನು ಪಡೆದಿದ್ದಾರೆ.
ಮೂಲತಃ ಪುತ್ತೂರಿನ ರಶ್ಮಿಗೆ ಬಾಲ್ಯದಿಂದಲೂ ಕ್ರೀಡೆಯಲ್ಲಿ ಅಪಾರ ಆಸಕ್ತಿ. ತಂದೆ ಬಾಲಕೃಷ್ಣ ಮತ್ತು ತಾಯಿ ಉಮಾವತಿ ಕೃಷಿ ಹಿನ್ನಲೆಯಿಂದ ಬಂದವರಾದರೂ ರಶ್ಮಿಯನ್ನು ಸೆಳೆದದ್ದು ಮಾತ್ರ ಕ್ರೀಡೆ. ಪ್ರೈಮರಿ ಶಾಲೆ ಕಲಿಕೆಯಲ್ಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡ ರಶ್ಮಿಗೆ ಪೋಷಕರೂ, ಶಿಕ್ಷಕರೂ ಸಹಕಾರ ನೀಡಿದರು. `ನಾನು ಒಂಬತ್ತನೇ ತರಗತಿಯಲ್ಲಿರುವಾಲೇ ಜಾವಲಿನ್ ತ್ರೋನಲ್ಲಿ ರಾಜ್ಯಮಟ್ಟದಲ್ಲಿ ಆಡಿದೆ ಅಲ್ಲಿಂದ ಜಾವಲಿನ್ ತ್ರೋನತ್ತ ಆಸಕ್ತಿ ಬೆಳೆಸಿಕೊಂಡೆ. ನಾನು ಇಲ್ಲಿಯ ವರೆಗೆ ಆಡಿರುವುದರಲ್ಲಿ ಇದು ನನ್ನ ಬೆಸ್ಟ್ ಪರ್ಫಾರ್ಮೆನ್ಸ್. ಆಳ್ವಾಸ್ಗೆ ನಾನು ಚಿರರುಣಿ’ ಎಂಬುದು ರಶ್ಮಿಯ ಮನದಾಳದ ಮಾತು.
ಸದ್ಯ ಆಳ್ವಾಸ್ನಲ್ಲಿ ಪ್ರಥಮ ವರ್ಷದ ಬಿ.ಪಿ.ಎಡ್ ಮಾಡುತ್ತಿರುವ ರಶ್ಮಿಗೆ ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಕನಸಿದೆ. ಅದಕ್ಕಾಗಿಯೇ ದಿನದಲ್ಲಿ ಸುಮಾರು ೫ ಗಂಟೆಯನ್ನು ವರ್ಕ್ಔಟ್ಗೆಂದೇ ಮೀಸಲಾಗಿಟ್ಟಿರುವ ಈಕೆಗೆ ಜಾವಲಿನ್ನಲ್ಲಿ ಮುಂದಿನ ಗುರಿ ೫೫ ಮೀಟರ್ ಎಸೆಯುವುದು ಅಗಿದೆ. ಪದಕವನ್ನು ಮೊದಲೇ ನಿರೀಕ್ಷಿಸಿದ್ದ ರಶ್ಮಿಗೆ ಫಿಟ್ನೆಸ್ ಸಮಸ್ಯೆ ಇದ್ದುದರಿಂದ ಸಾಧನೆಗೆ ಸ್ವಲ್ಪ ಹಿನ್ನಡೆಯಾಗಿತ್ತು. ಹಾಗಾಗಿ ಇನ್ನೂ ಹಾರ್ಡ್ವರ್ಕ್ ಮಾಡುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ.
ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ದಾಖಲೆ, ವಿಶ್ವವಿದ್ಯಾಲಯ ಮಟ್ಟದಲ್ಲಿ ದಾಖಲೆ ಮಾಡಿರುವ ರಶ್ಮಿ , ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿಯಲ್ಲಿ ಕಂಚಿನ ಪದಕ, ಫೆಡರೇಶನ್ ಲೆವೆಲ್, ಅಮೆಚೂರ್ ಮತ್ತು ವಿಶ್ವವಿದ್ಯಾನಿಲಯ ಮಟ್ಟ ಸೇರಿದಂತೆ ಇನ್ನೂ ಅನೇಕ ಅತ್ಲೆಟಿಕ್ ಕೂಟಗಳಲ್ಲಿ ಪದಕಗಳನ್ನು ಪಡೆದಿದ್ದಾರೆ. ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾಗಿ ಆಡಿ ಹೆಸರು ತರಬೇಕು ಎಂಬುದು ಅವರ ಮುಂದಿನ ಗುರಿಯಾಗಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯನ್ನು ಮಾಡಬೇಕು ಎಂಬುದು ರಶ್ಮಿಯ ಮುಂದಿನ ಗುರುಯಾಗಿದೆ.
ನಿಜಕ್ಕೂ ನನಗೆ ತುಂಬಾನೇ ಖುಷಿಯಾಗಿದೆ. ಇದು ನನ್ನ ಅತ್ಯಂತ ಶ್ರೇಷ್ಟವಾದ ಪರ್ಫಾರ್ಮೆನ್ಸ್ ಆಗಿದ್ದು, ಬಿಳ್ಳಿ ಪದಕ ಪಡೆದಿರುವುದು ಅತ್ಯಂತ ಸಂತೋಷವಾಗಿದೆ. ನನ್ನ ಮುಂದಿನ ಗುರಿ ೫೫ ಮೀಟರ್ ಜಾವಲಿನ್ನನ್ನು ಎಸೆದು ದಾಖಲೆ ಮಾಡುವುದಾಗಿದೆ. ಸರಿಯಾದ ಅಭ್ಯಾಸವನ್ನು ಮಾಡದಿದ್ದರೂ ಪದಕವನ್ನು ನಿರೀಕ್ಷಿಸಿದ್ದೆ. ಈ ಸಂದರ್ಭದಲ್ಲಿ ಸಂಸ್ಥೆಯ ಮೋಹನ್ ಆಳ್ವ, ಕೋಚ್ಗಳು ಮತ್ತು ನನಗೆ ಸಹಕಾರ ನೀಡಿದ ಎಲ್ಲರನ್ನೂ ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ.
ಇಂದಿನ ಫಲಿತಾಂಶ: 10.000 ಮೀ ಓಟದಲ್ಲಿ ಜಾದವ್ ಸಂಜೀವಿನಿ, ಪುಣೆ ವಿ.ವಿ.(ಪ್ರ), ಮಂಜು ಯಾದವ್, ಪಂಜಾಬಿ ವಿ.ವಿ.(ದ್ವಿ),ರೋಹಿನಿ ಪೌಟ್,ನಾಗಪುರ ವಿ.ವಿ.(ತೃ) ಬಹುಮಾನ ಪಡೆದಿರುತ್ತಾರೆ.ಈಟಿ ಎಸೆತ ಪೂನಮ್ ಚೌಧರಿ, ದೇವಿಲಾಲ್ ವಿ.ವಿ.(48.16 ದೂರ ಪ್ರಥಮ), ರಶ್ಮಿ ಕೆ. ಮಂಗಳೂರು ವಿ.ವಿ.(46.28 ದೂರ ದ್ವಿತೀಯ), ನವಗಿರೆ ಕಿರಣ್, ಪುಣೆ ವಿ.ವಿ.(42.88 ದೂ ತೃತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.