ಮಂಗಳೂರು,ಜ.19: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳದ ವತಿಯಿಂದ ವಿಶ್ವ ಹಿಂದೂ ಪರಿಷದ್‌ನ ಸುವರ್ಣ ಮಹೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ, ಮಹಾಲಿಂಗೇಶ್ವರ ದೇವಸ್ಥಾನದ ಎದುರುಗದ್ದೆಯಲ್ಲಿ ವಿರಾಟ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮವು ನಡೆದು ಶಾಂತ ರೀತಿಯಿಂದ ಮುಕ್ತಾಯಗೊಂಡು, ಕಾರ್ಯಕರ್ತರು ವಾಪಾಸ್ಸು ತೆರಳುವ ವೇಳೆ ಉಪ್ಪಿನಂಗಡಿಯ ಕರಾಯ ಎಂಬಲ್ಲಿ ವಿಭಿನ್ನ ಕೋಮಿನ ನಡುವೆ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೇ ಯಲ್ಲಿ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಲ್ಲು ಜಿಲ್ಲಾ ಎಸ್‌ಪಿ ಡಾ| ಶರಣಪ್ಪ ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 56 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕರಾಯ (ಉಪ್ಪಿನಂಗಡಿ) ಘರ್ಷಣೆಯ ನಂತರ ಜಿಲ್ಲೆಯ ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಕೆಲವೊಂದು ಪ್ರದೇಶಗಳಲ್ಲಿ ಕಿಡಿಗೇಡಿಗಳು ಶಾಂತಿ ಕದಡಲು ಪ್ರಯತ್ನಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕಿಡಿಗೇಡಿಗಳ ಚಲನವಲನಗಳ ಮೇಲೆ ಸೂಕ್ತ ನಿಗಾ ಇರಿಸಲು, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಆದೇಶಿಸಿದ್ದಾರೆ.
ಅಲ್ಲದೇ ಘಟನೆಗೆ ಸಂಬಂಧಿಸಿ ಈಗಾಗಲೇ ಸುಮಾರು 82 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದ್ದು, ಎಎಸ್‌ಪಿ 01. ಡಿಎಸ್‌ಪಿ 02, ಸಿಪಿಐ 05, ಪಿಎಸ್‌ಐ 27, ಎಎಸ್‌ಐ 20, ಹೆಚ್‌ಸಿ/ಪಿಸಿ 365, ಡಿಎಆರ್ ತುಕಡಿ 06, ಕೆಸ್‌ಆರ್‌ಪಿ 10, ಹಾಗೂ 01 ಆರ್‌ಎಎಫ್ ಪಡೆಯನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಹಾಗೂ ವಿಶೇಷ ರಾತ್ರಿ ಗಸ್ತು ಹಾಗೂ ವಾಹನ ತಪಾಸನೆಯನ್ನು ಸಹ ಕೈಗೊಂಡಿದೆ.