ಕನ್ನಡ ವಾರ್ತೆಗಳು

ಧೋನಿ ಜೀವನಾಧಾರಿತ ಸಿನೆಮಾದಲ್ಲಿ ಸುಶಾಂತ್ ನಟನೆ.

Pinterest LinkedIn Tumblr

dhoni_shushant_photo

ಮುಂಬೈ, ಜ.19 : ಅಕ್ಟೋಬರ್ ನಲ್ಲಿ ತೆರೆ ಕಾಣಲಿರುವ “ಎಂ ಎಸ್ ಧೋನಿ – ದ ಅಂಟೋಲ್ದ್ ಸ್ಟೋರಿ” ಸಿನೆಮಾದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ.

ನೀರಜ್ ಪಾಂಡೆ ನಿರ್ದೇಶಿಸುತ್ತಿರುವ ಈ ಸಿನೆಮಾ ಭಾರತೀಯ ಒಂದು ದಿನದ ಕ್ರಿಕೆಟ್ ತಂಡದ ನಾಯಕ ಎಂ ಎಸ್ ಧೋನಿ ಜೀವನಾಧಾರಿತ. “ಈ ಸಿನೆಮಾ ಅಕ್ಟೋಬರ್ 22 ರಂದು ಬಿಡುಗಡೆ ಕಾಣಲಿದೆ. ಫಾಕ್ಸ್ ಸ್ಟಾರ್ ಸ್ಟುಡಿಯೊಸ್ ಮತ್ತು ಇನ್ಸ್ಪೈರಡ್ ಎನ್ಂಟರ್ಟೈನ್ಮೆಂಟ್ ಈ ಸಿನೆಮಾವನ್ನು ಒಟ್ಟಾಗಿ ನಿರ್ಮಿಸಲಿದ್ದಾರೆ” ಎಂದು ನಾಲ್ಕು ತಿಂಗಳಿನಿಂದ ಕಾರ್ಯನಿರತರಾಗಿರುವ, ಧೋನಿ ಪಾತ್ರದಲ್ಲಿ ನಟಿಸುತ್ತಿರುವ ಸುಶಾಂತ್ ಸೋಮವಾರ ಟ್ವೀಟ್ ಮಾಡಿದ್ದಾರೆ.

“ಎಂ ಎಸ್ ಧೋನಿ – ದ ಅಂಟೋಲ್ದ್ ಸ್ಟೋರಿ” ರಾಂಚಿಯ ವಿನಮ್ರ ಹುಡುಗನೊಬ್ಬ ಅಂತರಾಷ್ಟ್ರೀಯ ಕ್ರಿಕೆಟ್ ನ ಭಾರತ ತಂಡದ ನಾಯಕಾನಾಗಿ ಮೇಲೇರಿದ ಈ ದೈತ್ಯ ಜೀವಂತ ದಂತಕಥೆ ಆಧಾರಿತ ಸಿನೆಮಾ. ವೈಯಕ್ತಿಕ ಕಥೆಯ ಜೊತೆಗೆ ಹಾಸ್ಯ, ಪ್ರಣಯ, ದುರಂತ ಮತ್ತು ಮಹತ್ಸಾಧನೆ ಕೂಡ ನೀರಜ್ ಪಾಂಡೆ ಅವರ ಈ ಸಿನೆಮಾ ಒಳಗೊಂಡಿರುತ್ತದೆ

Write A Comment