ಕನ್ನಡ ವಾರ್ತೆಗಳು

ಮಂಗಳೂರಿನಿಂದ ಅಬುಧಾಬಿ ಮತ್ತು ಮಸ್ಕತ್‌ಗೆ ನೇರ ವಿಮಾನಯಾನ ಅರಂಭ

Pinterest LinkedIn Tumblr

bajpe_airoport_photo

ಮಂಗಳೂರು, ಜ.20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ ಮತ್ತು ಮಸ್ಕತ್‌ಗೆ ನೇರ ವಿಮಾನಯಾನವನ್ನು ಏರ್ ಇಂಡಿಯಾ ಆರಂಭಿಸಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ವಾರದಲ್ಲಿ ನಾಲ್ಕು ವಿಮಾನಗಳು ಹಾರಾಟ ನಡೆಸುತ್ತಿವೆ.ಏರ್‌ ಇಂಡಿಯಾ ಸಂಸ್ಥೆಯು ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಿಂದ ಅಬುಧಾಬಿ ಮತ್ತು ಮಸ್ಕತ್‌ಗೆ ನೇರ ವಿಮಾನಯಾನವನ್ನು ಆರಂಭಿಸಲಿದೆ. ನೇರ ವಿಮಾನಯಾನ ಸಂಚಾರದಿಂದಾಗಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ

ಪ್ರಸ್ತುತ ಮಂಗಳೂರಿನಿಂದ ವಾರದಲ್ಲಿ ನಾಲ್ಕು ವಿಮಾನಗಳು ಮಧ್ಯದಲ್ಲಿ ಒಂದು ನಿಲುಗಡೆಯೊಂದಿಗೆ ಅಬುಧಾಬಿ ಮತ್ತು ಮಸ್ಕತ್‌ಗೆ ಹಾರಾಟ ನಡೆಸುತ್ತಿವೆ. ಮಾರ್ಚ್‌ನಿಂದ ನೇರ ವಿಮಾನಯಾನವನ್ನು ಆರಂಭಿಸುವುದಾಗಿ ಏರ್ ಇಂಡಿಯಾ ಹೇಳಿದೆ.

ಪ್ರಸ್ತುತ ಅಬುಧಾಬಿ ಮತ್ತು ಮಸ್ಕತ್‌ಗಳಿಂದ ಮಂಗಳೂರಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ವಿಮಾನ ಸಂಚರಿಸುತ್ತಿದೆ. ಅಬುಧಾಬಿಯಿಂದ ಸ್ಥಳೀಯ ಕಾಲಮಾನ ಮುಂಜಾನೆ 2.20ಕ್ಕೆ ಹೊರಡುವ ವಿಮಾನ ಬೆಳಗ್ಗೆ 7.30ಕ್ಕೆ ಮಂಗಳೂರು ತಲುಪುತ್ತಿದೆ. ಮಂಗಳೂರಿನಿಂದ ರಾತ್ರಿ 11ಕ್ಕೆ ಹೊರಡುವ ವಿಮಾನ ಅಬುಧಾಬಿಗೆ ಸ್ಥಳೀಯ ಕಾಲಮಾನ 1.05ಕ್ಕೆ ತಲುಪಲಿದೆ.
ಹಾಗೆಯೇ ಮಸ್ಕತ್‌ನಿಂದ ಸ್ಥಳೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಹೊರಡುವ ವಿಮಾನ ಮಂಗಳೂರಿಗೆ ರಾತ್ರಿ 8.10ಕ್ಕೆ ತಲಪುತ್ತದೆ. ಮಂಗಳೂರಿನಿಂದ ಬೆಳಗ್ಗೆ 10.05ಕ್ಕೆ ಹೊರಡುವ ವಿಮಾನ ಸ್ಥಳೀಯ ಕಾಲಮಾನ 2.40ಕ್ಕೆ ಮಸ್ಕತ್‌ಗೆ ತಲುಪುತ್ತದೆ.

Write A Comment