ಉಡುಪಿ/ಕಾರ್ಕಳ: ಜ. 21/01/2015 ರಿಂದ 31/01/2015 ರವರೆಗೆ ಕಾರ್ಕಳದಲ್ಲಿ ನಡೆಯಲಿರುವ ಕಾರ್ಕಳ ಮಹಾಮಸ್ತಾಕಾಭಿಷೇಕದ ಪ್ರಯುಕ್ತ ಭದ್ರತೆ, ಕಾನೂನು ಸುವ್ಯವಸ್ಥೆ, ವಿ.ಐ.ಪಿ ಹಾಗೂ ಅಪರಾಧ ತಡೆಗಟ್ಟುವಲ್ಲಿ ಈ ಕೆಳಗಿನಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದೋಬಸ್ತ್ ಬಗ್ಗೆ 3 ಡಿವೈಎಸ್ಪಿ, 7 ಸಿಪಿಐ, 31 ಪಿಎಸ್ಐ, 58 ಎಎಎಸ್ಐ, ಹೆಚ್ಸಿ 142, ಪಿಸಿ 262, ಮಹಿಳಾ ಸಿಬ್ಬಂದಿ 28 ಹಾಗೂ 282 ಹೋಂಗಾರ್ಡ್ ಸಿಬ್ಬಂದಿಯವರನ್ನು ನಿಯೋಜಿಸಸಲಾಗಿದೆ. ತುರ್ತು ಸಂದರ್ಭಕ್ಕಾಗಿ ಸಶಸ್ತ್ರ ಮೀಸಲು ಪಡೆಯ 3 ತುಕಡಿ ಹಾಗೂ 2 ಕೆಎಸ್ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಆಕಸ್ಮಿಕ ಅಗ್ನಿ ಕಂಡು ಬಂದಲ್ಲಿ ತುರ್ತು ಸಂದರ್ಭಕ್ಕಾಗಿ 8 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಗೋಮಟಬೆಟ್ಟದ ಸುತ್ತಮುತ್ತ, ಕಾರ್ಯಕ್ರಮ ನಡೆಯುವ ಸ್ಥಳ, ಗಣ್ಯ ವ್ಯಕ್ತಿಗಳು ಸಂಚರಿಸುವ ಸ್ಥಳಗಳಲ್ಲಿ ಬಾಂಬ್ ಪತ್ತೆದಳ ತಂಡದವರು ಪದೇ ಪದೇ ಚೆಕ್ ಮಾಡುವರೇ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರಿಗೆ ಮಾಹಿತಿ ನೀಡಲು 5 ಹೊರಠಾಣೆ 1) ಜೋಡುರಸ್ತೆ 2) ಬಂಡೀ ಮಠ ಬಸ್ ನಿಲ್ದಾಣ 3) ಪುಲ್ಕೇರಿ ಜಂಕ್ಷನ್ 4) ದಾನಶಾಲೆ 5) ಬಸ್ ನಿಲ್ದಾಣ ಹಾಗೂ ತಾಲೂಕಿನಾದ್ಯಂತ 10 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದಿದ್ದು, ಅಪರಾಧ ತಡೆಗಟ್ಟುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಅಪರಾಧ ತಡೆಗೆ ಡಿವೈಎಸ್ಪಿ ನೇತೃತ್ವದ ವಿಶೇಷ ತಂಡವನ್ನು ರಚಿಸಿದ್ದು ಈ ಬಗ್ಗೆ ಹೆಚ್ಚಿನ ನಿಗಾ ಇಡುವಂತೆ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ತಿಳಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ವಾಹನ ನಿಲುಗಡೆಗೆ 8 ಕಡೆ ಪಾರ್ಕಿಂಗ್ ವ್ಯವಸ್ಥೆ ಇದ್ದು 1) ಪಡುತಿರುಪತಿ ಮೈದಾನ ಪುಲ್ಕೇರಿ, 2) ಆನೆಕೆರೆ ಜಂಕ್ಷನ್ ಸಂಜೀವ ನಾಯ್ಕರವರ ಮೈದಾನ , 3) ಗೋಮಟಬೆಟ್ಟದ ಎದುರು ದಕ್ಷಿಣ ದಿಕ್ಕಿನ ಶ್ರೀ ದೇವಿ ಗಣೇಶ್ ಕಾಮತ್ ರವರ ಮೈದಾನ, 4) ಪ್ರಿಯದರ್ಶಿನಿ ಗ್ಯಾಸ್ ಗೋಡೌನ್ ಎದುರಿನ ಮೈದಾನ, 5) ದಾನಶಾಲೆ ಸದಾನಂದ ಕಾಮತ್ ರಸ್ತೆಯ ಪೂರ್ವ ಹಾಗೂ ಪಶ್ಚಿಮ ಬದಿಯ ಗದ್ದೆ, 6) ಬಾಹುಬಲಿ ಪ್ರವಚನ ಮಂದಿರದ ಎದುರು ಭಾಗದಲ್ಲಿರುವ ಖಾಲಿ ಜಾಗ (ವಿಐಪಿ ಪಾರ್ಕಿಂಗ್), 7) ಬಾಹುಬಲಿ ಪ್ರವಚನ ಮಂದಿರದ ಪಕ್ಕದಲ್ಲಿರುವ ಸ್ಮಶಾನದ ಬಳಿ ಹಾಗೂ 8) ಲಕ್ಷ್ಮಿದೇವಿ ಕಲ್ಯಾಣ ಮಂಟಪದ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಈ ಬಗ್ಗೆ ಸೂಕ್ತ ರೀತಿಯಲ್ಲಿ ಸಹಕರಿಸಬೇಕಾಗಿ ಇಲಾಖೆ ಮನವಿ ಮಾಡ್ಲಾಗಿದೆ. ಯಾವುದೇ ಮಾಹಿತಿಗಾಗಿ ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ
1. ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ – 9480805421
2. ಪೊಲೀಸ್ ವೃತ್ತ ನಿರೀಕ್ಷಕ- 9480805435
3. ಪೊಲೀಸ್ ಉಪ ನಿರೀಕ್ಷಕರು, ಕಾರ್ಕಳ ನಗರ ಠಾಣೆ – 9480805461