ನವದೆಹಲಿ,ಜ.23 : ಕೇಂದ್ರ ಸರ್ಕಾರ 2014-15ನೇ ಸಾಲಿನ ಪದ್ಮ ಪ್ರಶಸ್ತಿ ಪಟ್ಟಿಯನ್ನು ಶುಕ್ರವಾರ ಪ್ರಕಟಮಾಡಿದೆ. ನಾಲ್ವರು ಗಣ್ಯರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದು, ಆರು ಗಣ್ಯರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ, ಬಿಟೌನ್ ನಟ ಅಮಿತಾಭ್ ಬಚ್ಚನ್, ಆರ್ಟ್ ಆಫ್ ಲಿವಿಂಗ್ ನ ಶ್ರೀರವಿಶಂಕರ್ ಗುರೂಜಿ ಮತ್ತು ಯೋಗ ಗುರು ಬಾಬಾ ರಾಮ್ ದೇವ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಗೌರವ ಸಿಕ್ಕಿದೆ
ಇನ್ನು ಪದ್ಮ ಭೂಷಣ ಪ್ರಶಸ್ತಿಯನ್ನು ಬಾಲಿವುಡ್ ನಟ ಹಿರಿಯ ನಟ ದಿಲೀಪ್ ಕುಮಾರ್, ಎನ್ ಗೋಪಾಲಸ್ವಾಮಿ, ಕೆ.ಎಸ್ ವಾಜಪೇಯಿ, ಪಿ.ವಿ ರಾಜಾರಾಮನ್, ವಕೀಲ ಹರೀಶ್ ಸಾಳ್ವೆ ಮತ್ತು ಅಶೋಕ್ ಗುಲಾಟಿ ಅವರಿಗೆ ನೀಡುವುದಾಗಿ ಘೋಷಿಸಿದೆ.