ಕನ್ನಡ ವಾರ್ತೆಗಳು

ಮಂಗಳೂರು ವಿವಿಯಲ್ಲಿ ರಾಷ್ಟ್ರಮಟ್ಟದ ವಿಚಾರಗೋಷ್ಠಿ

Pinterest LinkedIn Tumblr

unversity_worlshop_phot

ಮಂಗಳೂರು, ಜ.23  : ಸಾಮಾಜಿಕ ಜಾಲತಾಣಗಳು ಸಮಾಜ ವಿರೋಧಿ ಜಾಲ ತಾಣವಾಗಬಾರದು ಎಂದು ಮಧ್ಯಪ್ರದೇಶದ ಮಕನ್‌ಲಾಲ್ ಪತ್ರಿಕೋದ್ಯಮ ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ.ಬ್ರಿಜ್ ಕಿಶೋರ್ ಕುತ್ಯಾಲ್ ತಿಳಿಸಿದ್ದಾರೆ. ಅವರು ಗುರುವಾರ ಮಂಗಳಗಂಗೋತ್ರಿ ವಿಶ್ವ ವಿದ್ಯಾನಿಲಯದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಮ್ಮಿಕೊಂಡ ‘ಮಾಧ್ಯಮ ಮತ್ತು ಸಮಕಾಲೀನ ಪ್ರಪಂಚ’ ಎಂಬ ವಿಷಯದ ಬಗೆಗಿನ ರಾಷ್ಟ್ರೀಯ ವಿಚಾರಗೋಷ್ಠಿ ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಸಕ್ತ ಸಮೂಹ ಮಾಧ್ಯಮ ಕ್ಷೇತ್ರದಲ್ಲಿ ವೇಗವಾದ ಬದಲಾವಣೆಗಳು ನಡೆಯುತ್ತಿದೆ. ಪರಿಣಾಮವಾಗಿ ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡಿವೆ. ಆದರೆ ಕೆಲವೊಮ್ಮೆ ಈ ಜಾಲತಾಣಗಳನ್ನು ಸಾಮಾಜಿಕ ಜಾಲತಾಣಗಳು ಎಂದು ಕರೆಯಲು ಮುಜುಗರ ವಾಗುತ್ತದೆ. ಸಾಮಾಜಿಕ ಜಾಲತಾಣಗಳು ಸಮಾಜ ವಿರೋಧಿ ಜಾಲತಾಣಗಳಂತೆಯೂ ಕಂಡುಬರುತ್ತಿವೆ ಎಂದು ಕುತ್ಯಾಲ್ ತಿಳಿಸಿದರು.

ಸಮಕಾಲೀನ ಪ್ರಪಂಚದಲ್ಲಿ ಪ್ರತಿ ಏಳು ನಿಮಿಷಗಳಿ ಗೊಮ್ಮೆ ಮಾನವ ಸಂವಹನ ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಗಳು ಸಂಭವಿಸುತ್ತಿದೆ. ಪ್ರಕೃತಿಯಲ್ಲಿ ಪರಸ್ಪರ ಅವಲಂಬನೆ ಇರುವಂತೆ ಮಾಧ್ಯಮ ಕ್ಷೇತ್ರದಲ್ಲೂ ಕೃತಕವಾಗಿ ನಿರ್ಮಿಸಿರುವ ಪರಸ್ಪರ ಸಂವಹನದ ವ್ಯವಸ್ಥೆ ಇರುತ್ತದೆ. ಬದಲಾಗಿರುವ ಮಾಧ್ಯಮ ಕ್ಷೇತ್ರದಿಂದಾಗಿ ಸಾಂಪ್ರದಾಯಿಕ ಸಮೂಹ ಮಾಧ್ಯಮಗಳಾದ ಟಿ.ವಿ, ರೇಡಿಯೊ, ವೃತ್ತ ಪತ್ರಿಕೆಗಳು ಪುನರ್ ಸ್ವರೂಪವನ್ನು ಪಡೆದುಕೊಂಡಿದೆ.

ಮಾಧ್ಯಮಗಳಲ್ಲಿ ವಿತಂಡವಾದದ ಚರ್ಚೆ:
ಪ್ರಾಚೀನ ಕಾಲದಲ್ಲಿ ನಾರದ ಮುನಿ ಹೇಳಿರುವಂತೆ ಕೇವಲ ವಿತಂಡವಾದದಿಂದ ಪ್ರಯೋಜನವಿಲ್ಲ ಎನ್ನುವ ಮಾತು ಸಂವಹನ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಪ್ರಸಕ್ತ ಬದಲಾಗಿರುವ ಸಮೂಹ ಮಾಧ್ಯಮದಲ್ಲಿ ಅನಗತ್ಯ ಚರ್ಚೆಗಳು ನಡೆಯುತ್ತವೆ. ಕೆಲವು ಟಿ.ವಿ. ಮಾಧ್ಯಮದ ಕೆಲವು ಚರ್ಚೆಗಳನ್ನು ಗಮನಿಸುವಾಗ ಇಂತಹ ವಿತಂಡವಾದದ ಚರ್ಚೆಗಳು ನಡೆಯುತ್ತದೆ ಎನ್ನುವ ಭಾವನೆಯಾಗುತ್ತದೆ ಎಂದು ಕುತ್ಯಾಲ್ ತಿಳಿಸಿದರು.

ಪ್ರಸಕ್ತ ಸಮೂಹ ಮಾಧ್ಯಮಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೆ ಹಲವು ಮಾಧ್ಯಮಗಳು ಸ್ವಾತಂತ್ರ ಪೂರ್ವದಲ್ಲಿ ಹಾಗೂ ಸ್ವಾತಂತ್ರನಂತರದ ದಿನಗಳಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿವೆ. ಈ ಎಲ್ಲಾ ಬೆಳವಣಿಗೆಯ ಕಾಲಘಟ್ಟವನ್ನು ಗಮನಿಸುವಾಗ ಆರ್ಥಿಕ ಬೆಳವಣಿಗೆ ಹಾಗೂ ಮಾಧ್ಯಮದ ಬೆಳ ವಣಿಗೆಯ ನಡುವೆ ಸಂಪರ್ಕ ಇರುವುದು ಕಂಡು ಬರುತ್ತದೆ ಎಂದು ಸಮಾರಂಭದ ದಿಕ್ಸೂಚಿ ಭಾಷಣ ಮಾಡಿದ ಹೈದರಾಬಾದ್ ವಿಶ್ವ ವಿದ್ಯಾನಿಲಯದ ಪ್ರೊ.ಡಾ.ಬಿ.ಪಿ.ಸಂಜಯ್ ತಿಳಿಸಿದರು.

ಆಧುನಿಕ ಜಗತ್ತಿನಲ್ಲಿ ಫೇಸ್‌ಬುಕ್‌ಗಳಂತಹ ಹೊಸ ಮಾಧ್ಯಮಗಳ ಬೆಳವಣಿಗೆಯಾಗಿದೆ. ಅಂತರ್ಜಾಲದ ಬಳಕೆಯಲ್ಲಿ ಅಮೆರಿಕಾ ಮತ್ತು ಚೀನಾ ದೇಶದವರನ್ನು ಹೊರತುಪಡಿಸಿದರೆ ಭಾರತ ಮೂರನೆ ಸ್ಥಾನದಲ್ಲಿದೆ. ದೇಶದಲ್ಲಿ ಸುಮಾರು 150 ಮಿಲಿಯ ಜನರಿಗಿಂತಲೂ ಹೆಚ್ಚು ಜನರು ಅಂತರ್ಜಾಲವನ್ನು ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಅನು ಕೂಲತೆಗಳಿದ್ದರೂ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದು ಸಂಜಯ್ ತಿಳಿಸಿದರು.

ದೃಶ್ಯ ಮಾಧ್ಯಮಗಳು ಟಿ.ಆರ್.ಪಿ. ಗಳಿಕೆಗಾಗಿ ಬ್ರೇಕಿಂಗ್ ನ್ಯೂಸ್ ನೀಡುವ ತರಾತುರಿಯಲ್ಲಿ ತಮ್ಮ ಹೊಣೆಗಾರಿಕೆಯನ್ನು ಮರೆತು ವರ್ತಿಸುತ್ತಿದೆ ಎಂದು ಸಂಜಯ್ ತಿಳಿಸಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಭೈರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಜಿ.ಪಿ.ಶಿವರಾಮ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥೆ ಪ್ರೊ.ವಹಿದಾ ಸುಲ್ತಾನ್ ವಂದಿಸಿದರು.

ಸಮೂಹ ಮಾಧ್ಯಮಗಳು ಕೇವಲ ಕೆಲವರ ಹಿಡಿತದಲ್ಲಿರುವ ಮಾಧ್ಯಮವಾಗಬಾರದು. ಅದರಲ್ಲಿ ಪ್ರಜಾಪ್ರ ಭುತ್ವದ ಧ್ವನಿ ಇರಬೇಕು. ಸಮೂಹ ಮಾಧ್ಯಮ ಗಳು ಒಂದು ಉತ್ತಮ ಸಮಾಜವನ್ನು ಕಟ್ಟಬಹುದು. ಅಲ್ಲಿ ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗಬಹುದು. ಅದೇ ರೀತಿ ಸಮಾಜದಲ್ಲಿ ಒಡಕನ್ನು ಉಂಟುಮಾಡಬಹುದು. ಪರಸ್ಪರ ದ್ವೇಷವನ್ನು ಹುಟ್ಟಿಸಲು ಕಾರಣವಾ ಗಬಹುದು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಕುತ್ಯಾಲ್ ತಿಳಿಸಿದರು.

Write A Comment