ಮಂಗಳೂರು,ಜ.23 : ದ.ಕ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಶ್ರೀಧರ್ಮಸ್ಥಳ ಮಂಜುನಾಥೇಶವ ಉದ್ಯಮಾಡಳಿತ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ “ಸಿನರ್ಜಿ 2015” ಉದ್ಯಮೋತ್ಸವವು ‘ನಿರ್ಮಾಣ ಎಂಬ ವಿಚಾರಧಾರೆಯು ಶುಕ್ರವಾರ ನಡೆಯಿತು. ಬಿಸಿಎ ವಿಭಾಗದ ವತಿಯಿಂದ ರಾಜ್ಯ ಮಟ್ಟದ ಸಿಗ್ಮ -2015 ರೆಟ್ರೋಸ್ಫೆಕ್ಟ್ರ ಎಂಬ ವಸ್ತುವನ್ನು ಒಳಗೊಂಡ ಮಾಹಿತಿ ತಂತ್ರಜ್ಞಾನ ಉತ್ಸವವನ್ನು ಏರ್ಪಡಿಸಲಾಗಿತ್ತು.
ದೇಶಾದ್ಯಂತ ಹರಡಿಕೊಂಡಿರುವ ಮೆನೇಜ್ ಮೆಂಟ್ ವಿಧ್ಯಾರ್ಥಿಗಳನ್ನು ಒಟ್ಟು ಗೂಡಿಸಿ ತಾಯಿನಾಡನ್ನು ಅಭಿವೃದ್ಧಿಗೊಳಿಸುವಲ್ಲಿನ ತಮ್ಮ ಆಲೋಚನೆಗಳಿಗೆ ಹಾಗೂ ಹೊಸ ವಿಚಾರದಾರೆಗಳಿಗೆ ಬೆಳಕು ಚೆಲ್ಲುವುದು ಈ ಉದ್ಯಮೋತ್ಸವದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈ ಸಿನರ್ಜಿ 2015 ಅನ್ನು ಆಯೋಜಿಸಲಾಗಿದೆ ಎಂದು ಇಗ್ನಿಟೀ ಟು ದ ನ್ಯೂ ಮುಂಬೈ ಇದರ ಅಧ್ಯಕ್ಷರಾದ ಅತುಲ್ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ಮುಖ್ಯ ಅಥಿತಿಯಾಗಿ ಭಾರತ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಅನಂತ್ ಜಿ ಪೈ ಉಪಸ್ಥಿತರಿದ್ದರು.
ಈ ಉದ್ಯಮೋತ್ಸವದಲ್ಲಿ ಉದ್ಯಮಕ್ಕೆ ಸಂಬಂಧ ಪಟ್ಟ ಮಾರ್ಕೆಟಿಂಗ್, ಫೈನಾನ್ಸ್, ಬಿಸ್ ನೆಸ್ ಕ್ವಿಜ್, ಪಬ್ಲಿಸಿಸ್ಟ್, ಹ್ಯೂಮನ್ ರಿಸೋರ್ಸ್ ಬೆಸ್ಟ್ ಮ್ಯಾನೇಜರ್ ಹಾಗೂ ಫೋಟೋಗ್ರಾಫಿ ಮೊದಲಾದವುಗಳನ್ನು ಆಯೋಸಲಾಗಿದ್ದು, ವಿಧ್ಯಾರ್ಥಿಗಳಲ್ಲಿ ವ್ಯವಾಹಾರಿಕ ಪ್ರಪಂಚದ ವಿವಿಧ ಮಜಲುಗಳನ್ನು ಪರಿಚಯಿಸುವುದು ಹಾಗೂ ಅತ್ಮಸ್ಥೈರ್ಯವನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ.