ಮಂಗಳೂರು,ಜ. 23: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್ (ರಿ) ಮತ್ತು ಆಳ್ವಾಸ್ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಙಾನ ಮಹಾವಿದ್ಯಾಲಯ, ಮೂಡಬಿದಿರ ಇವರ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಹತ್ತು ದಿನಗಳ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ವಠಾರ, ಬಡಗ ಎಡಪದವು ಮಿಜಾರು, ಮಂಗಳೂರು ಜನವರಿ 23,2015 ರಿಂದ ಫೆಬ್ರವರಿ 1, 2015 ರವರೆಗೆ ಜರುಗಲಿರುವುದು, ಎಂದು ಮುಖ್ಯ ಸಂಘಟಕರಾದ ಶ್ರೀ ವಿಜಯನಾಥ ಶೆಟ್ಟಿ ತಿಳಿಸಿದ್ದಾರೆ. ಶಿಬಿರವು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ತನಕ ಎಲ್ಲಾ ಹತ್ತು ದಿನಗಳಲ್ಲಿ ಜರುಗುವುದು.
ಚಿಕಿತ್ಸೆ ಪಡೆಯಲಿಚ್ಛಿಸುವವರು ಜನವರಿ 23 ಮತ್ತು 24 ರಂದು ಉಚಿತ ಆರೋಗ್ಯ ತಪಾಸಣೆಗೆ ಹಾಜರಾಗಬೇಕು. ತಪಾಸಣೆಗೆ ಒಳಗಾದವರಿಗೆ ಜನವರಿ 25 ರ ನಂತರ ಎಲ್ಲಾ ಚಿಕಿತ್ಸೆಯನ್ನು ನೀಡಲಾಗುವುದು.
ಅತಿ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಬೊಜ್ಜು, ಲ್ಯೂಕೊಡರ್ಮ (ಚರ್ಮದಲ್ಲಿ ಬಿಳಿಕಲೆಗಳು), ದೀರ್ಘಕಾಲಿಕ ಬೆನ್ನು ನೋವು, ಕುತ್ತಿಗೆ ನೋವು, ಅಸ್ತಮಾ, ಗ್ಯಾಸ್ಟ್ರಿಕ್ ತೊಂದರೆಗಳು, ಪೈಲ್ಸ್, ಚರ್ಮ ವ್ಯಾಧಿಗಳು, ಪಕ್ಷವಾತ, ಅಜೀರ್ಣ ಸಂಬಂಧಿ ಆರೋಗ್ಯ ಸಮಸ್ಯೆಗಳು, ಸುಸ್ತು, ರಕ್ತಹೀನತೆ, ನರಗಳ ದೌರ್ಬಲ್ಯ, ಕಿಡ್ನಿಯಲ್ಲಿನ ಕಲ್ಲುಗಳು, ನಿದ್ರಾಹೀನತೆ, ಹೀಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಈ ಶಿಬಿರದಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಈ ಶಿಬಿರದಲ್ಲಿ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ, ಸೂಜಿ ಚಿಕಿತ್ಸೆ (ಅಕ್ಯುಪಂಕ್ಚರ್), ಮಣ್ಣಿನ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಅಂಗಮರ್ದನ, ಫಿಸಿಯೋತೆರಪಿ, ಆಹಾರ ಚಿಕಿತ್ಸೆ, ಜಲ ಚಿಕಿತ್ಸೆ, ಆಯಸ್ಕಾಂತ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಉಪಯುಕ್ತ ಮಾಹಿತಿ, ಸಲಹೆ ಸೂಚನೆಗಳು ಮತ್ತು ವಿಧಾನಗಳ ಬಗ್ಗೆ ತಿಳಿಹೇಳಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8884659777, 0824-2012277,, ಡಾ. ಪರಮೇಶ್ವರ – 9535924052 ; ಡಾ. ವನಿತಾ ಶೆಟ್ಟಿ-9008004542 ; ಡಾ. ದೀಪಕ್ ಬಂಗೇರ – 7259627538