ಮಂಗಳೂರು, ಜ.27: ಎಸ್ಕೆಎಸ್ಸೆಸ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಗಣರಾಜ್ಯೋತ್ಸವ ದಿನದ ಪ್ರಯುಕ್ತ ಸೋಮವಾರ ಅಡ್ಯಾರ್ ಕಣ್ಣೂರಿನಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.
ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಉದ್ಘಾಟಿಸಿದರು. ಸೈಯದ್ ಅಮೀರ್ ಅಲಿ ತಂಙಳ್ ಕಿನ್ಯ ದುಆ ಮಾಡಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಸ್ಹಾಕ್ ಫೈಝಿ, ಎಸ್ಕೆಎಸೆಸ್ಸೆಫ್ ಕೇಂದ್ರ ಸಮಿತಿಯ ಸದಸ್ಯ ಬಾವ ಜೀಲಾನಿ ಮುಖ್ಯ ಭಾಷಣಗೈದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್ ಸುಧೀರ್ ಶೆಟ್ಟಿ, ಮಂಗಳೂರು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಅಶ್ರ್, ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ, ಸೈಯದ್ ಬಾತಿಷ್ ತಂಙಳ್, ಸೈಯದ್ ಅಲಿ ತಂಙಳ್ ಕರಾವಳಿ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಸ್ವದಕತುಲ್ಲಾ ಫೈಝಿ, ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ, ಕಣ್ಣೂರು ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಇಕ್ಬಾಲ್ ಕಣ್ಣೂರು, ಹಾಜಿ ಅಬ್ದುರ್ರಹ್ಮಾನ್, ರಫೀಕ್ ಬೋರುಗುಡ್ಡೆ, ಹಮೀದ್ ಕಣ್ಣೂರು, ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ಹಾಜಿ ಶಾಹುಲ್ ಹಮೀದ್ ಮೆಟ್ರೋ, ಮಾಹಿನ್ ದಾರಿಮಿ, ಇಕ್ಬಾಲ್ ಅಹ್ಮದ್ ಮುಲ್ಕಿ, ನಝೀರ್ ವಳಚ್ಚಿಲ್ ಪದವು, ಉಪ್ಪಿನಂಗಡಿ ವಲಯಾಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್, ಸೈಯದ್ ಅನಸ್ ತಂಙಳ್ ಗಂಡಿಬಾಗಿಲು, ರಿಯಾಝ್ ಹಾಜಿ ಬಂದರ್,ಉಸ್ಮಾನ್ ಅಬ್ದುಲ್ಲಾ ಸೂರಿಂಜೆ ಇಬ್ರಾಹೀಂ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಸಲೀಂ ಹಂಡೇಲು ಸ್ವಾಗತಿಸಿದರು. ಸುರತ್ಕಲ್ ಕ್ಲಸ್ಟರ್ ಅಧ್ಯಕ್ಷ ಹಾಜಿ ಜಲೀಲ್ ಬದ್ರಿಯಾ ವಂದಿಸಿದರು.