ಕೈಕಂಬ,ಜ.27 : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವರು ಮಾಡಿದ ಅವಾಂತರದಿಂದ ಗುರುಪುರ ಕೈಕಂಬದಲ್ಲಿ ಕ್ಷಣ ಹೊತ್ತು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತ್ತು. ಇವರನ್ನು ಮೂಡಬಿದ್ರೆ ಸಮೀಪದ ಅಶ್ವತ್ಥಪುರ ನಿವಾಸಿ ಎಂದು ಗುರುತಿಸಲಾಗಿದ್ದು, ಸಾರ್ವಜನಿಕರ ಸಹಕಾರದಿಂದ ಮನೆಗೆ ಸುರಕ್ಷಿತವಾಗಿ ಸೇರಿಸಲಾಗಿದೆ. ಇವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ಖಿನ್ನತೆಯನ್ನು ನಿವಾರಿಸಲು ಮದ್ಯ ಸೇವಿಸಿದ ಕಾರಣ ಈ ರೀತಿ ಅವಾಂತರಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.
ಗುರುಪುರ ಕೈಕಂಬದ ಜಂಕ್ಷನ್ನಲ್ಲಿ ರಸ್ತೆ ಮಧ್ಯೆ ತೂರಾಡುತ್ತಾ ಸಂಚಾರ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೆ ಎಲ್ಲರಿಗೂ ಬೈಯ್ಯುತ್ತಾ, ರಸ್ತೆ ಮಧ್ಯೆಯೇ ಮಲಗಲು ಯತ್ನಿಸಿದ್ದರಿಂದ ವಾಹನಕ್ಕೆ ಸಿಲುಕುವ ಸಾಧ್ಯತೆಯೂ ಇತ್ತು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕೊನೆಗೆ ಇವರ ಅವಾಂತರದಿಂದ ಬೇಸೆತ್ತ ಸಾರ್ವಜನಿಕರು ಉಪಾಯವಾಗಿ ರಸ್ತೆ ಬದಿಗೆ ಕರೆದುಕೊಂಡು ನಿಲ್ಲಿಸಿದ್ದಾರೆ. ಕೊನೆಗೆ ಅವರ ಕಿಸೆಯಲ್ಲಿದ್ದ ಮೊಬೈಲ್ ನಿಂದ ಮನೆಯವರಿಗೆ ಸಂಪರ್ಕಕಿಸಿ ಮನೆಗೆ ಸೇರಿಸುವಲ್ಲಿ ಸಹಕರಿಸಿದ್ದಾರೆ,