ಕನ್ನಡ ವಾರ್ತೆಗಳು

ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವಕ್ಕೆ ಸಿ.ಸಿ.ಕ್ಯಾಮೆರಾ ಅಳವಡಿಕೆಗೆ ಎಸ್.ಪಿ ಶೇಖರಪ್ಪ ಸೂಚನೆ

Pinterest LinkedIn Tumblr

cctv

ಉಪ್ಪಿನಂಗಡಿ.ಫೆ.09  : ಇಲ್ಲಿನ ಶ್ರೀ ಸಹಸ್ರ ಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ಇದೇ 17ರಿಂದ 25ರ ತನಕ ನಡೆ ಯಲಿದ್ದು, ಆ ಪ್ರಯುಕ್ತ ಶಾಂತಿ ಪಾಲನೆಗಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರಪ್ಪ ಮಾತನಾಡಿ, ಉಪ್ಪಿನಂಗಡಿ ದೇವಸ್ಥಾನದ ಬ್ರಹ್ಮಕಲ ಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಕಳ್ಳತನ ತಡೆಯುವ ನಿಟ್ಟಿನಲ್ಲಿ ಪೇಟೆಯಲ್ಲಿನ ಎಲ್ಲಾ ವರ್ತಕರೂ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಇದರಿಂದ ಇಲಾಖೆಗೂ, ವರ್ತಕರಿಗೂ ಅನುಕೂಲವಾಗಲಿದೆ ಎಂದರು.

ಅಲ್ಲದೇ ಪ್ರತಿ ಮನೆಗಳಲ್ಲೂ, ದೇವಸ್ಥಾನ ಹಾಗೂ ಮಸೀದಿ ಆವರಣದಲ್ಲೂ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಗ್ರಾಮ ಪಂಚಾಯಿತಿಯಿಂದ ಕ್ರಮ ಕೈಗೊಳ್ಳಬೇಕು. ಇದಕ್ಕೆ ಮಂಜೂರಾತಿ ದೊರಕಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸುವುದಾಗಿ ಹೇಳಿದರು.  ದೇವಸ್ಥಾನದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಸಭಾಭವನ, ಅನ್ನಛತ್ರ ಸೇರಿದಂತೆ ಹೆಚ್ಚು ಜನಸಂಖ್ಯೆ ಸೇರುವ ಆಯಾಕಟ್ಟಿನ ಸ್ಥಳಗಳಲ್ಲಿ ದೇವಸ್ಥಾನದವರು ಬಾಡಿಗೆ ನೆಲೆಯಲ್ಲಿ ಸಿಸಿಟಿವಿ ಪಡೆದುಕೊಂಡು ಅಳವಡಿಸು ವಂತೆಯೂ ಶೇಖರಪ್ಪ ಸಲಹೆ ನೀಡಿದರು.

ಬದಲಿ ಬಸ್ ನಿಲ್ದಾಣ: ಕಾರ್ಯಕ್ರಮದ ದಿನಗಳಲ್ಲಿ ದೂರದಿಂದ ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಬದಲಿ ಬಸ್ ನಿಲ್ದಾಣ ಮಾಡುವ ನಿಟ್ಟಿ ನಲ್ಲೂ ಸಭೆಯಲ್ಲಿ ಚರ್ಚೆ ನಡೆಯಿತು.

ಗಾಂಧಿ ಪಾರ್ಕ್‌ನಿಂದ ಬಸ್‌ನಿಲ್ದಾಣದ ತನಕ ಬ್ಯಾಂಕ್‌ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ನಿರ್ಧರಿಸ ಲಾಯಿತು. ಉಪ್ಪಿನಂಗಡಿ ಪೇಟೆಯಲ್ಲಿ ಮದ್ಯದಂಗಡಿಗಳನ್ನು ಪ್ರತಿದಿನ ಸಂಜೆ 6ರಿಂದ ಬಂದ್ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಂಟ್ವಾಳ ಎಎಸ್‌ಪಿ ರಾಹುಲ್ ಕುಮಾರ್, ಡಿವೈಎಸ್‍ಪಿ ಭಾಸ್ಕರ ರೈ, ಉಪ್ಪಿನಂಗಡಿ ಠಾಣಾಧಿಕಾರಿ ಜಗದೀಶ್ ರೆಡ್ಡಿ ಪೂರಕ ಮಾಹಿತಿ ನೀಡಿದರು.

ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಧನ್ಯಕುಮಾರ್ ರೈ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ, ಜಿ.ಪಂ. ಸದಸ್ಯ ಕೇಶವ ಗೌಡ ಬಜತ್ತೂರು, ತಾಪಂ. ಸದಸ್ಯ ಉಮೇಶ್ ಶೆಣೈ, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಉಪಾಧ್ಯಕ್ಷ ಹಾರೂನ್ ರಶೀದ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ನಳಿನಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಗಂಗಾಧರ, ಸದಸ್ಯರಾದ ಅಬ್ದುಲ್ ರಹಿಮಾನ್, ರಾಮಚಂದ್ರ ಮಣಿ ಯಾಣಿ, ಹರೀಶ್ ನಾಯಕ್, ಯು.ಟಿ. ತೌಸಿಫ್, ಪಿಡಿಒ ಅಬ್ದುಲ್ ಅಸಫ್, ಉಪ್ಪಿನಂಗಡಿ ಸಿಎ ಬ್ಯಾಂಕ್‌ ನಿರ್ದೇಶಕ ಅಜೀಜ್ ಬಸ್ತಿಕ್ಕಾರ್, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಇತರರು ಇದ್ದರು.

Write A Comment