ಕುಂದಾಪುರ: ಬಹುನಿರೀಕ್ಷಿತ ಕಾಸರಗೋಡು-ಬೈಂದೂರು ಪ್ಯಾಸೆಂಜರ್ ರೈಲು ಸಂಚಾರಕ್ಕೆ ಬೈಂದೂರು ರೈಲು ನಿಲ್ದಾಣದಲ್ಲಿ ಸೋಮವಾರ ಸಂಜೆ ಸುಮಾರಿಗೆ ಶಿವಮೊಗ್ಗ-ಬೈಂದೂರು ಕ್ಷೇತ್ರದ ಸಂಸದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಸಿರು ನಿಶಾನೆ ತೋರುವ ಮೂಲಕ ಅಧೀಕ್ರತವಾಗಿ ಚಾಲನೆ ನೀಡಿದರು.
ಫೆ. 9ರಂದು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಸಂಜೆ 6 ಗಂಟೆಗೆ ದೇಶದಾದ್ಯಂತ ೯ ನೂತನ ರೈಲುಗಳ್ಇಗೆ ರಿಮೋಟ್ ಕಂಟ್ರೋಲ್ ಮೂಲಕ ಏಕಕಾಲದಲ್ಲಿ ಚಾಲನೆ ನೀಡಿದ ಸಂದರ್ಭ ಬೈಂದೂರಿನಲ್ಲಿ ಯಡಿಯೂರಪ್ಪ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಕಾಸರಗೋಡು-ಬೈಂದೂರು ಪ್ಯಾಸೆಂಜರ್ ರೈಲು ಗಾಡಿಗೆ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಕರಾವಳಿ ಭಾಗದ ಹಲವಾರು ರೈಲ್ವೇ ನಿಲ್ದಾಣಗಳಲ್ಲಿ ಆದಾಯ ತರುವ ರೈಲ್ವೇ ನಿಲ್ದಾಣಗಳ ಪೈಕಿ ಬೈಂದೂರು ವಿಮಾನ ನಿಲ್ದಾಣವೂ ಒಂದಾಗಿದೆ. ಈ ನಿಲ್ದಾಣದ ಮೂಲಕವಾಗಿ ಹಲವರು ಉದ್ಯೋಗಾಶ್ರೀತರಾಗಿದ್ದಾರೆ. ಈ ಭಾಗದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮೂಲಕವಾಗಿ ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿಸಲಾಗುತ್ತದೆ.
ಕಾಸರಗೋಡು- ಬೈಂದೂರು ರೈಲನ್ನು ಕಾಸರಗೋಡುವಿನ ಗುರುವಾಯಿನೂರಿಗೂ ವಿಸ್ತರಿಸಿ ಅಲ್ಲಿನ ಶ್ರೀ ಕ್ರಷ್ಣ ಮಂದಿರ ಹಾಗೂ ಬೈಂದೂರು ಸಮೀಪದ ಕೊಲ್ಲೂರು ಮೂಕಾಂಬಿಕ ದೇವಳಕ್ಕೆ ಹೋಗಿ ಬರುವ ಭಕ್ತರಿಗೆ ಅನೂಕೂಕ ಕಲ್ಪಿಸುವ ಈ ರೈಲನ್ನು “ಮುರುಳಿ ಮೂಕಾಂಬಿಕಾ’ ರೈಲು ಎಂದು ನಾಮಕರಣ ಮಾಡಲು ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ತಾನೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಿಂದ ರೈಲ್ವೇ ಅಬಿವ್ರದ್ಧಿಗಾಗಿ %೫೦ ರಷ್ಟು ಶೇರು ನೀಡುವ ಮೂಲಕ ಸರ್ವಾಂಗೀಣ ಅಭಿವ್ರದ್ಧಿಗೆ ಒತ್ತು ನೀಡಲಾಗಿತ್ತು. ಆದರೇ ಈಗಿನ ಮುಖ್ಯಾಂತ್ರಿಗಳು ಇದನ್ನು ನಿರಾಕರಿಸುವ ಬಗ್ಗೆ ಹೇಳಿಕೆ ನೀಡಿರುವುದು ಸರಿಯಲ್ಲ, ಈ ಶೇರು ನೀಡುವ ಮೂಲಕ ರೈಲ್ವೇ ಆಭಿವ್ರದ್ಧಿ ಬಗ್ಗೆ ಕಾಳಜಿ ವಹಿಸುವಂತೆ ಮುಖ್ಯಂತ್ರಿಗಳಿಗೆ ಮನವರಿಕೆಯನ್ನು ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ಉಪಯುಕ್ತ ರೈಲು: ಕೇಂದ್ರ ಸರಕಾರವು ಕಳೆದ ರೈಲ್ವೇ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿದ್ದ ಏಕೈಕ ರೈಲು ಇದಾಗಿದ್ದು, ಇದರ ಆರಂಭದೊಂದಿಗೆ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಭಕ್ತರಿಗೆ ದೇವಿಯ ದರ್ಶನ ಸುಲಭವಾಗಲಿದೆ.
ವೇಳಾಪಟ್ಟಿ, ನಿಲ್ದಾಣಗಳು
ಹೊಸ ರೈಲಿನ (ಗಾಡಿ ನಂಬರ್: 56666/ 56665) ವೇಳಾಪಟ್ಟಿ ಮತ್ತು ನಿಲ್ದಾಣಗಳನ್ನು ಪ್ರಕಟಿಸಲಾಗಿದ್ದು, ಫೆ. 10ರಿಂದ ಸಂಚಾರ ಆರಂಭಿಸಲಿದೆ. ಕಾಸರಗೋಡಿನಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುವ ರೈಲು ಮಧ್ಯಾಹ್ನ 11.50ಕ್ಕೆ ಬೈಂದೂರು ತಲುಪಲಿದೆ. ಬೈಂದೂರಿನಿಂದ ಮಧ್ಯಾಹ್ನ 1.05ಕ್ಕೆ ಹೊರಟು ಸಂಜೆ 6.10ಕ್ಕೆ ಕಾಸರಗೋಡು ತಲುಪಲಿದೆ.
16 ಕೋಚ್‌ಗಳನ್ನು ಹೊಂದಿರುವ ಈ ಪ್ಯಾಸೆಂಜರ್ ರೈಲು ಕಾಸರಗೋಡು, ಬೈಂದೂರು ಸೇರಿ 18 ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಬೈಂದೂರಿನಿಂದ ಹೊರಡುವ ರೈಲು ಬಿಜೂರು, ಸೇನಾಪುರ, ಕುಂದಾಪುರ, ಬಾಕೂìರು, ಉಡುಪಿ, ಇನ್ನಂಜೆ, ಪಡುಬಿದ್ರಿ, ನಂದಿಕೂರು, ಮೂಲ್ಕಿ, ಸುರತ್ಕಲ್, ತೋಕೂರು, ಮಂಗಳೂರು ಜಂಕ್ಷನ್, ತೊಕ್ಕೊಟ್ಟು, ಉಳ್ಳಾಲ, ಮಂಜೇಶ್ವರ, ಉಪ್ಪಳ ಹಾಗೂ ಕುಂಬ್ಳೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.