ಕನ್ನಡ ವಾರ್ತೆಗಳು

2015-16 ನೇ ಸಾಲಿನ ಬಜೆಟ್ `ಮೇಕ್ ಇಂಡಿಯಾ ಕ್ಕೆ ಪುಷ್ಠಿ ನೀಡಿದೆ : ಸಂಸದ ನಳಿನ್ ಕುಮಾರ್ ಕಟೀಲ್

Pinterest LinkedIn Tumblr

Nalin_Kumar_Kateel

ಮಂಗಳೂರು,ಫೆ.28 :ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಲೋಕಸಭೆಯಲ್ಲಿ ಮಂಡಿಸಿದ 2015-16ನೇ ಸಾಲಿನ ಬಜೆಟ್ ಶ್ರೇಷ್ಠ ಭಾರತದ ಪರ ಇರುವ ಬಜೆಟ್. ಬಡವರ, ಕೃಷಿಕರ, ಯುವಕರ , ಮಹಿಳೆಯರ ಪರ ಚಿಂತನೆಯ ಹಾಗೂ `ಮೇಕ್ ಇಂಡಿಯಾ’ಕ್ಕೆ ಪುಷ್ಟಿ ನೀಡುವ ಬಜೆಟ್ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.

ಸುಕನ್ಯಾ ಸಮೃದ್ಧಿ , ನಿರ್ಭಯ ನಿಗೆ ದುಪ್ಪಟ್ಟು ಹಣ ನೀಡಿಕೆ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ವಿಶೇಷ ಕಾಳಜಿ, ಕೃಷಿಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ, ರೈತರಿಗೆ ಬೇಕಾದ ವಿದ್ಯುತ್, ಅವರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ರೈತರ ವಿಮಾಮೊತ್ತದ ಹೆಚ್ಚಳ, ವೈಯಕ್ತಿಕ ತೆರಿಗೆದಾರರಿಗೆ ವಿನಾಯಿತಿಗಳು, ಕೈಗಾರಿಕೆ , ಮೂಲಸೌಕರ್ಯಗಳ ವೃದ್ಧಿಗೆ ಆದ್ಯ ಗಮನ, ಶಿಕ್ಷಣಕ್ಕಾಗಿ ಹೆಚ್ಚಿನ ನಿಧಿ , ರಕ್ಷಣೆಗೆ ಒತ್ತು ಸೇರಿದಂತೆ ಎಲ್ಲ ನಿಟ್ಟಿನಲ್ಲೂ ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ಬಜೆಟ್ ಇದಾಗಿದೆ ಎಂದು ಅವರು ಅಭಿನಂದಿಸಿದ್ದಾರೆ.

Write A Comment