ಮಂಗಳೂರು, ಮಾ.05: ಉಳ್ಳಾಲ-ಪಾನೀರ್ ಸೇರಿದಂತೆ ಇತ್ತೀಚೆಗೆ ದೇಶಾದ್ಯಂತ ನಡೆದ ಪ್ರಾರ್ಥನಾ ಕೇಂದ್ರಗಳ ಮೇಲಿನ ದಾಳಿ ಮತ್ತು ಮದರ್ ತೆರೆಸಾರ ಅವಹೇಳನ ವಿರುದ್ಧ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮಂಗಳೂರು ಧರ್ಮಪ್ರಾಂತದ ಯುವ ಆಯೋಗ ಹಾಗೂ ಯುವ ಜಾಗೃತ ವೇದಿಕೆ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ವಿನ್ಸೆಂಟ್ ಆಳ್ವ ಪಾಂಬೂರು, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಕ್ರೈಸ್ತ ಮುಖಂಡ ರಾಯ್ ಕ್ಯಾಸ್ತಲಿನೊ ಮಾತನಾಡಿದರು.
ಐಸಿವೈಎಂ ನಿರ್ದೇಶಕ ಫಾದರ್ ರೊನಾಲ್ಡ್ ಡಿಸೋಜ, ವೈಸಿಎಸ್ ನಿರ್ದೇಶಕ ಫಾದರ್ ಎಡ್ವಿನ್ ಕೊರೆಯಾ, ಅಧ್ಯಕ್ಷೆ ಮೆಲ್ರಿಡಾ ರೊಡ್ರಿಗಸ್, ಸ್ಟಾನಿ ಅಲ್ವಾರಿಸ್, ಯುವ ಮುಖಂಡ ಶೆಲ್ಡನ್ ಕ್ರಾಸ್ತಾ ಮೊದಲಾದವರು ಭಾಗವಹಿಸಿದ್ದರು.