ಕುಂದಾಪುರ: ಕಳೆದ ಮೂರು ತಿಂಗಳ ಹಿಂದೆ ತ್ರಾಸಿ ಬೀಚ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾದ ಹೆಮ್ಮಾಡಿ ಕಟ್ಟು ನಿವಾಸಿ ಸಂತೋಷ್(32) ಭಾನುವಾರ ಸಂಜೆ ವೆನ್ಲಾಕ್ ಆಸ್ಪತ್ರೆಯಲ್ಲಿ ಮತಪಟ್ಟಿದ್ದಾರೆ.
ಘಟನೆ ವಿವರ: 2014, ಡಿ.8ರಂದು ಸಂಜೆ ವೇಳೆ ತ್ರಾಸಿಯಲಿದ್ದ ಇವರ ಆಮ್ಲೇಟ್ ಅಂಗಡಿಗೆ ಕೆಲವರು ತಮ್ಮ ಬೈಕಿನಲ್ಲಿ ಬಂದು ಆಮ್ಲೇಟ್ ನೀಡುವಂತೆ ಹೇಳಿದ್ದು, ಆಮ್ಲೇಟ್ ಮಾಡ ಹೊರಟ ಸಂತೋಷ್ ಅವರಿಗೆ ಹಿಂಬದಿಯಿಂದ ಚೂರಿ ಇರಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಚೂರಿ ಇರಿತದಿಂದ ತೀವ್ರ ಘಾಸಿಗೊಳಗಾಗಿ ಕಳೆದ ಮೂರು ತಿಂಗಳುಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಇವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಗಂಗೊಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.