ಮಂಗಳೂರು,ಮಾರ್ಚ್.10 : ನಗರದ ಕಾಲೇಜಿನ ವಿದ್ಯಾರ್ಥಿಯ ಮೇಲೆ ಸರ್ಕಾರಿ ಬಸ್ಸಿನ ಕಂಡೆಕ್ಟರ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ನಗರದ ರೋಸಾರಿಯೋ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ಬಂದರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಕಂಡೆಕ್ಟರ್‌ನಿಂದ ಹಲ್ಲೆಗೀಡಾದ ವಿದ್ಯಾರ್ಥಿಯನ್ನು ಉಪ್ಪಿನಂಗಡಿಯ ಸಮ್ಮದ್ ಎನ್ನಲಾಗಿದ್ದು, ಈತ ಸ್ಟೇಟ್ ಬ್ಯಾಂಕಿನಿಂದ ಉಪ್ಪಿನಂಗಡಿಗೆ ಹೋಗುವ ಸಂದರ್ಭದಲ್ಲ ಇಬ್ಬರು ಹೆಣ್ಣು ಮಕ್ಕಳು ಬಸ್ಸಿಗೆ ಹತ್ತುವ ಮೊದಲೇ ಕಂಡೆಕ್ಟರ್ ಬಸ್ಸು ಚಲಿಸಲು ಸೂಚಿಸಿದ್ದರ ಪರಿಣಾಮ ಹೆಣ್ಣು ಮಕ್ಕಳು ಬಸ್ಸು ಹತ್ತಲಾಗಲಿಲ್ಲ. ಇದನ್ನು ಸಮ್ಮದ್ ಪ್ರಶ್ನಿಸಿದ್ದರಿಂದ ಕೆರಳಿದ ಕಂಡೆಕ್ಟರ್ ಈತನ ಹಲ್ಲೆ ಮಾಡಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಈ ಹೆನ್ನೆಲೆಯಲ್ಲಿ ಮಂಗಳವಾರ ಕಂಡೆಕ್ಟರ್ ನನ್ನು ಕೂಡಲೇ ಬಂಧಿಸಿ ಕಂಡೆಕ್ಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಪಾಸ್ ಹೊಂದಿರುವ ವಿದ್ಯಾರ್ಥಿಗಳನ್ನು ಕಂಡೆಕ್ಟರ್ ಹೀಯಾಳಿಸುವುದಲ್ಲದೇ ನಿರ್ಧಿಷ್ಟ ನಿಲುಗಡೆಯಿಂದ ದೂರದಲ್ಲಿ ಬಸ್ಸು ನಿಲ್ಲಿಸುವ ಅಬ್ಯಾಸ ಕಂಡೆಕ್ಟರ್‌ಗೆ ಇದೆ ಎಂದೂ ವಿದ್ಯಾರ್ಥಿಗಳು ದೂರಿದ್ದಾರೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂದರು ಠಾಣಾ ಪೊಲೀಸರು ಕಂಡೆಕ್ಟರ್ ವಿರುದ್ಧ ಕ್ರಮ ಜರಗಿಸುವ ಭರವಸೆ ನೀಡಿದ ಮೇಲೆ ವಿದ್ಯಾರ್ಥಿಗಳು ತರಗತಿಗೆ ತೆರಳಿದರು.