ಮಂಗಳೂರು, ಮಾ.18: ದುಬೈಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ ಸುಮಾರು 583.3ಗ್ರಾಂ ತೂಕದ 15,25,330 ರೂ. ವೌಲ್ಯದ 5ಚಿನ್ನದ ತುಂಡುಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ನೋರ್ವನಿಂದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೇರಳದ ಅಬ್ದುಲ್ ಖಾದರ್ ಕೆ., ಮಂಗಳವಾರ ದುಬಾನಿಂದ ಮಂಗಳೂರಿಗೆ ಜೆಟ್ ಏರ್‌ವೇಸ್ ಮೂಲಕ ಬಂದಿಳಿದಾಗ ಸೀಟ್‌ಬಳಿ ಬಚ್ಚಿಟ್ಟು ಕೊಂಡಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ತಿಳಿದು ಬಂದಿದೆ.