ಮಂಗಳೂರು, ಮಾ.20: ದಕ್ಷ, ಪ್ರಾಮಾಣಿಕ, ಹೃದಯವಂತ ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವು ಪ್ರಕರಣವನ್ನು ಜನಾಭಿಪ್ರಾಯದಂತೆ ರಾಜ್ಯ ಸರಕಾರ ಸಿಬಿಐಗೆ ವಹಿಸಬೇಕು ಎಂದು ಮರು ಒತ್ತಾಯ ಮಾಡಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ತನಿಖೆಯನ್ನು ಸಿಬಿಐಗೆ ಒಪ್ಪಿಸದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುವುದು ಎಂದು ಎಚ್ಚರಿಸಿದ್ದಾರೆ.
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಕರಣದ ಕುರಿತಂತೆ ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ ಹಾಗೂ ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಹಿನ್ನೆಲೆಯಲ್ಲಿ ಪಕ್ಷದ ಮುಖಂಡೆ ಸೋನಿಯಾ ಗಾಂಧಿ ಅವರು ಮಧ್ಯೆ ಪ್ರವೇಶಿಸಬೇಕು ಎಂದರು. ಮಾತ್ರವಲ್ಲದೇ ಪಕ್ಷದ ರಾಷ್ಟ್ರೀಯ ಮುಖಂಡರಾದ ದಿಗ್ವಿಜಯ್ ಸಿಂಗ್ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ಪೂಜಾರಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಉಪ ಮೇಯರ್ ಕವಿತಾ ವಾಸು, ಮುಖಂಡರಾದ ಪಿ.ವಿ. ಮೋಹನ್,ಟಿ.ಕೆ. ಸುಧೀರ್, ನಝೀರ್ ಬಜಾಲ್, ನಾಗೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
1 Comment
ಆತ್ಮೀಯರೆ, ಇಂತಹ ಸರ್ಕಾರವನ್ನು ಎಲ್ಲಿಯಾದರು ನೋಡಲು ಸಾಧ್ಯವೆ? ಸಾವಿರಾರು ಜನರ ಪ್ರತಿಭಟನೆ, ಪ್ರತಿ ಪಕ್ಷಗಳ ಆಹೋ ರಾತ್ರಿ ಧರಣಿ; ಪೋಷಕರ ಮನವಿ, ಪ್ರಾಮಾಣಿಕ ಅಧಿಕಾರಿಗಳ ಒತ್ತಾಯ, ಮೀಡಿಯಾದ ಪಕ್ಷಪಾತ ರಹಿತ ಚರ್ಚೆ ಗಳು, ಇಷ್ಟೇಲೢ ಇದ್ದರೂ ಈ ಸರ್ಕಾರ ಏಕ CBIಗೆ ಒಪ್ಪಿಸುತ್ತಿಲೢ. ಅಂದರೆ ಈ ಸಾವಿನಲ್ಲಿ ಏನೋ ರಹಸ್ಯವಿದೆ.
ಢೊಂಗೀ ಪ್ರಗತಿಪರ ಚಿಂತಕರೆ, ಮಾನವ ಹಕ್ಕುಗಳ ಪ್ರತಿಪಾದಕರೇ; ಪ್ರಗತಿ ಪರ ಚಿಂತಕ ಮಠಾಧಿಪತಿಗಳೆ; ಸ್ವಯಂಷೋಶಿತ ಬುದ್ಧಿ ಜೀವಿಗಳೆ, ಎಲ್ಲಿ ಹೋದಿರಿ , ಬನ್ನಿ ಪ್ರತಿಭಟನೆ ಯಲ್ಲಿ ಭಾಗವಹಿಸಿ CBI ತನಿಖೆಗೆ ಒತ್ತಾಯಯಿಸಿ ಆಗಲಾದರು ನಮ್ಮನ್ನು ಅಗಲಿದ ಪ್ರಾಮಾಣಿಕ ರವಿ ಯವರ ಆತ್ಮಕ್ಕೆ ಶಾಂತಿ ಮತ್ತು ನ್ಯಾಯ ಸಿಗಬಹುದು. ಮುಂದೆ ಪ್ರಾಮಾಣಿಕರು ಹೆಚ್ಚಾಗ ಬಹುದು.
ಬನ್ನಿ ನಾವೆಲ್ಲರೂ ಸ್ವಯಂ ಪ್ರೇರಿತರಾಗಿ
ಪ್ರಧಾನಿ ಯವರಿಗೆ Tweet & mail ಮಾಡೋಣ CBI ತನಿಖೆಗೆ ಒತ್ತಾಯ ಮಾಡೋಣ.