ಮಂಗಳೂರು,ಮಾರ್ಚ್.21 : ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಜತೆಗೆ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿಯೂ ತಟ್ಟಿದೆ. ಮಾರುಕಟ್ಟೆಯಲ್ಲಿ ಶುಕ್ರವಾರ ಖರೀದಿಯ ಭರಾಟೆ ಕಂಡುಬಂದಿತು. ಬೇಡಿಕೆ ಹೆಚ್ಚಾಗಿರುವುದರಿಂದ ಮಲ್ಲಿಗೆ ಹೂವು, ಕನಕಾಂಬರ ಕಾಕಡ ಹೂವು ಹಾಗೂ ಸೇವಂತಿ ಬೆಲೆ ಏರಿಕೆಯಾಗಿತ್ತು. ಆದರೆ, ಚೆಂಡು ಹೂವು, ಕರಿಷ್ಮಾ ಗುಲಾಬಿ ಹೂವುಗಳ ದರ ಗ್ರಾಹಕರ ಕೈಗೆಟಕುವಂತಿತ್ತು.`ಹಬ್ಬದ ಸಂದರ್ಭದಲ್ಲಿ ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಈ ಬಾರಿ ಯುಗಾದಿ ಹಬ್ಬದ ಪ್ರಯುಕ್ತ ಹೂವಿನ ಬೆಲೆ ಜಾಸ್ತಿಯಾಗಿದೆ’
ಮಾರುಕಟ್ಟೆಗಳಲ್ಲಿ ಒಂದು ಬೆಲೆಯಿದ್ದರೆ, ನಗರದ ಬೇರೆ ಬೇರೆ ಭಾಗಗಳಲ್ಲಿ ಇನ್ನೊಂದು ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗಾಗಿ, ಗ್ರಾಹಕರಿಗೆ ಯುಗಾದಿಯ ಸಿಹಿಯೊಂದಿಗೆ ದರ ಈರಿಕೆಯ ಕಹಿಯ ಬಿಸಿ ಕೂಡ ತಟ್ಟುತ್ತಿದೆ.