ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ಸಿತಾರ್ ಎಂಟರ್ಪ್ರೈಸಸ್ನ ಶಟರ್ ಬೀಗ ಮುರಿದ ಕಳ್ಳರು 5.26ಲಕ್ಷ ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದಾರೆ. ಮಾ. 21 ರಿಂದ ಮಾ. 23 ರ ಮಧ್ಯೆ ಪ್ರಕರಣ ನಡೆದಿದ್ದು ಸಂಸ್ಥೆಯ ಪಾಲುದಾರ ಪ್ರಭಾಕರ ಕಲ್ಮಾಡಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ವಿವರ: ಮಾ. 21, ರಾತ್ರಿ 7.30ಕ್ಕೆ ಸಂಸ್ಥೆಯ ಶಟರ್ ಬೀಗ ಹಾಕಿ ಪ್ರಭಾಕರ ಕಲ್ಮಾಡಿ ಮನೆಗೆ ತೆರಳಿದ್ದು ಸೋಮವಾರ ಬೆಳಗ್ಗೆ 7.30ಕ್ಕೆ ಪೇಪರ್ ಹಾಕುವ ಹುಡುಗ ಮಾಹಿತಿ ನೀಡಿದ್ದ.
ಶಟರ್ಗೆ ಹಾಕಿದ್ದ ಬೀಗ ತುಂಡರಿಸಿದ ಕಳ್ಳರು ಕಂಪ್ಯೂಟರ್ ಮಾನಿಟರ್, ಐರನ್ ಬಾಕ್ಸ್, ಗ್ಯಾಸ್ ಸ್ಟವ್, ಇಂಡೆಕ್ಷನ್, ಮೊಬೈಲ್, ಲ್ಯಾಪ್ಟಾಪ್ ಇತ್ಯಾದಿಗಳನ್ನು ಕದ್ದೊಯ್ದಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
(ಸಾಂದರ್ಭಿಕ ಚಿತ್ರ)