ಕನ್ನಡ ವಾರ್ತೆಗಳು

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡ 2 ವರ್ಷದ ಡಾಲಿ ಶಿವಾನಿ.

Pinterest LinkedIn Tumblr

shivani_dali_photo_1

ಬೆಂಗಳೂರು, ಮಾರ್ಚ್. 25 : ಪುಟ್ಟ ಬಾಲಕಿಗೆ ಕೇವಲ ಎರಡು ವರ್ಷ, ಆದರೆ ಆಕೆ ಇಡುವ ಗುರಿ ಯಾವ ಪರಿಣತ ಬಿಲ್ಲುಗಾರನಿಗಿಂತ ಕಡಿಮೆಯಿಲ್ಲ. ಹೌದು. ಆಂಧ್ರ ಪ್ರದೇಶದ ಬಾಲಕಿಯ ಆರ್ಚರಿ ಲೋಕದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾಳೆ. ಆರ್ಚರಿಯಲ್ಲಿ ಅಚ್ಚರಿ ಸಾಧನೆ ಮಾಡಿರುವ ಆಂಧ್ರ ಪ್ರದೇಶದ ಬಾಲಕಿಯೊಬ್ಬಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾಳೆ. ಹಿರಿಯ ಕ್ರೀಡಾಪಟುಗಳ ಮುಂದೆ ಆರ್ಚರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಾಲಕಿಯ ಹೆಸರು ಡಾಲಿ ಶಿವಾನಿ

ಐದು ಮೀಟರ್ ಮತ್ತು ಏಳು ಮೀಟರ್ ದೂರಚಿದ್ದು 36 ಬಾಣಗಳನ್ನು ಹೊಡೆದು 388 ಅಂಕ ಗಳಿಸಿ ಹಿರಿಯರನ್ನು ಮೀರಿಸಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಪ್ರತಿನಿಧಿ ವಿಶ್ವಜೀರ್ ರೇ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರತಿನಿಧಿ ಪಿ. ರಾಮಕೃಷ್ಣ ಬಾಲಕಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವ ಬಗ್ಗೆ ಅಧಿಕೃತ ಘೋಷಣೆ ನೀಡಿದ್ದಾರೆ.

shivani_dali_photo_2

ಅಂತಾರಾಷ್ಟ್ರೀಯ ಆರ್ಚರಿ ಚಾಂಪಿಯನ್ ಚೆರುಕುಲಿ ಲೆನಿನ್ ಅವರ ಕಿರಿಯ ಸಹೋದರಿ ಈ ಶಿವಾನಿ. ಶಿವಾನಿ 2010 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಸತ್ಯನಾರಾಯಣ ಅವರ ವೋಲ್ಗಾ ಆರ್ಚರಿ ಇನ್ಸ್ಟಿಟ್ಯುಟ್ ನಲ್ಲಿ ಈ ಬಾಲಕಿ ತರಬೇತಿ ಪಡೆದಿದ್ದಾಳೆ. ಬಾಲಕಿಯ ಸಾಧನೆಯನ್ನು ಮೆಚ್ಚಿಕೊಂಡಿರುವ ತಂದೆ ಚೆರಿಕುಲಿ ಸತ್ಯನಾರಾಯಣ, ಮಗಳ ದಾಖಲೆಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಿಸುವ ಆಸೆಯಿದೆ ಎಂದು ಹೇಳಿದ್ದಾರೆ.

Write A Comment