ಕನ್ನಡ ವಾರ್ತೆಗಳು

ಜೂನ್ 27 , 28: ಕೆನಡಾದ ಟೊರೊಂಟೊದಲ್ಲಿ 11 ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ

Pinterest LinkedIn Tumblr

banglore_news_photo_1

ಬೆಂಗಳೂರು,ಮಾರ್ಚ್.28  : ಹೃದಯವಾಹಿನಿ ಮಂಗಳೂರು, ಕನ್ನಡ ಕಸ್ತೂರಿ ರೇಡಿಯೊ ಟೊರೊಂಟೊ ಮತ್ತು ಬಿ.ವಿ.ನಾಗ್ ಕಮ್ಯುನಿಕೇಷನ್ ಇಂಕ್. ಟೊರೆಂಟೊದ ಸಂಯುಕ್ತವಾಗಿ 2 ದಿನಗಳ 11 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಟೊರೊಂಟೊ ಒಂಟಾರಿಯೋದಲ್ಲಿರುವ ಗ್ರಾಂಡ್‌ವಿಕ್ಟೋರಿಯನ್ ಕನ್ವೆಷನ್ ಸೆಂಟರ್‌ನಲ್ಲಿ ಜೂನ್ 27 ಮತ್ತು 28 ರಂದು ಹಮ್ಮಿಕೊಂಡಿರುತ್ತೇವೆ

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ‌ಅನಿವಾಸಿ ಕನ್ನಡಿಗರ ಗೋಷ್ಠಿ ಜರುಗಲಿವೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಯಕ್ಷಗಾನ ಮುಂತಾದ ಕಲೆಗಳು ಪ್ರದರ್ಶನಗೊಳ್ಳುವವು. ಕರ್ನಾಟಕ ಕಲೆ, ಮತ್ತು ಸಂಸ್ಕೃತಿ ವಿದೇಶಿ ನೆಲವಾದ ಕೆನಡಾದಲ್ಲಿ ಪ್ರತಿಬಿಂಬಿಸಲಿದೆ. ಈ ಹಿಂದೆ 2004 ಮತ್ತು 2012  ರಲ್ಲಿ ಅಬುಧಾಬಿ, 2005 ಮತ್ತು 2010 ರಲ್ಲಿ ಸಿಂಗಪುರ, 2006 ಮತ್ತು 2011  ರಲ್ಲಿ ಬಹರೇನ್, 2007 ರಲ್ಲಿ ಕುವೈಟ್ 2008ರಲ್ಲಿ ಕತಾರ್,2009 ರಲ್ಲಿ ದುಬೈ, ಮತ್ತು 2013 ರಲ್ಲಿ ಆಫ್ರಿಕಾದ ಕೀನ್ಯಾದಲ್ಲಿ ‌ಅನುಕ್ರಮವಾಗಿ 10  ಸಮ್ಮೇಳನಗಳು ನಡೆದಿವೆ.

banglore_news_photo_2

ಸಮ್ಮೇಳನ ನಡೆಯಲಿರುವ ಸಭಾಂಗಣದ ಹೊರವಲಯದಲ್ಲಿ ವಸ್ತು ಪ್ರದರ್ಶನ, ಪುಸ್ತಕ ಮೇಳವನ್ನು ಏರ್ಪಡಿಸಲಾಗುವುದು. ಕೆನಡಾದಲ್ಲಿ 1000 ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರಚಾರ ನೀಡಲಾಗುವುದು. ಕೆನಡಾದ ಅಮೇರಿಕಾ ಗಡಿ ಪ್ರದೇಶಗಳಾದ, ಬಫೆಲೊ, ಕನೆಕ್ಟಿಕಟ್, ಮತ್ತು ಡೆಟ್ರಾಯ್‌ಟ್ ನಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ‌ ಆಮಂತ್ರಿಸಲಾಗುವುದು. ಜೂನ್ 27  ರಂದು ಮಧ್ಯಾಹ್ನ ನೆರವೇರಲಿರುವ ಉದ್ಘಾಟನಾ ಸಮಾರಂಭದ ಗಣ್ಯರನ್ನಾಗಿ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀ ಆಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀಮತಿ ಉಮಾಶ್ರೀ ಅವರನ್ನು ಆಮಂತ್ರಿಸಲಾಗುವುದು. ಕೆನಡಾದ ಭಾರತ ರಾಯಭಾರಿ ಮತ್ತು ಟೊರೊಂಟೊದ ಮೇಯರ್ ಅವರಿಗೆ ಈಗಾಗಲೇ ಆಮಂತ್ರಣ ನೀಡಲಾಗಿದೆ.

ಜೂನ್ 28  ರ ಸಂಜೆ ಜರಗಲಿರುವ ಸಮಾರೋಪ ಸಮಾರಂಭದ ಗಣ್ಯರನ್ನಾಗಿ ಕೇಂದ್ರ ಸರ್ಕಾರದ ಕಾನೂನು ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡ, ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್ ಹನುಮಂತಯ್ಯ ಅವರನ್ನು ‌ಆಮಂತ್ರಿಸಲಾಗುವುದು.

ಕರ್ನಾಟಕ ಮತ್ತುಭಾರತದ ಇತರ ಭಾಗಗಳಿಂದ ಸುಮಾರು 70  ಕ್ಕೂ ಹೆಚ್ಚು ಸದಸ್ಯರ ಸಾಂಸ್ಕೃತಿಕನಿಯೋಗ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದೆ. ವಿವಿಧ ದೇಶಗಳ ಕನ್ನಡ ಸಂಘಗಳ ಪದಾಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿರುವರು.

ವಿಶೇಷ ಸಂಚಿಕೆ: 11 ನೇವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಅಂಗವಾಗಿ ವಿಶೇಷ ಸಂಚಿಕೆಯನ್ನು ಹೊರತರಲಿದ್ದು,ಲೇಖಕರ ಅಂತರಾಷ್ಟ್ರೀಯ ಬಾಂಧವ್ಯ ಮತ್ತು ಜಾಗತಿಕ ಶಾಂತಿ ಹಾಗೂ ಸಾಮರಸ್ಯ ಬಿಂಬಿಸುವ ಲೇಖನ, ಕವನಗಳಿಗೆ ಆದ್ಯತೆ ನೀಡಲಾಗುವುದು. ಕಥೆ, ಹಾಸ್ಯ ಲೇಖನ ಮತ್ತು ವೈಚಾರಿಕ ಲೇಖನಗಳನ್ನು ಕಳುಹಿಸಬಹುದು. ಅನಿವಾಸಿ ಕನ್ನಡಿಗರು hrudayavahini@rediffmail.com ಈ ಇ-ಮೇಲ್‌ಗೆ ರವಾನಿಸಬಹುದು,

ಸಮ್ಮೇಳನಾಧ್ಯಕ್ಷರು: ಸಾಹಿತ್ಯ ಮತ್ತುಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿರುವ ಹಿರಿಯ ಮಹಾನೀಯವರೋರ್ವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು.

ಪ್ರಶಸ್ತಿ: ವಿಶ್ವಕನ್ನಡ ಸಂಸ್ಕೃತಿಸಮ್ಮೇಳನದ ಅಂಗವಾಗಿ ಪ್ರತಿ ವರ್ಷದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಕಲಾವಿದರು, ಸಾಹಿತಿಗಳು, ವೈದ್ಯರು, ತಂತ್ರಜ್ಞರು ಹಾಗೂ ಸಮಾಜ ಸೇವಕರಿಗೆವಿಶ್ವಮಾನ್ಯರು-2014  ((Globalman2014) ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯನ್ನುಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು.

ಸಮ್ಮೇಳನದಲ್ಲಿಭಾಗವಹಿಸಲಿಚ್ಚಿಸುವ ಕಲಾವಿದರು, ಸಾಹಿತಿಗಳು ಹಾಗೂ ಪ್ರಶಸ್ತಿ ಹಾಗೂಸಮ್ಮೇಳನಾಧ್ಯಕ್ಷರ ಆಯ್ಕೆಗೆ ಹೆಸರು ಸೂಚಿಸುವವರು ಮಂಜುನಾಥ್ ಅಸೋಸಿಯೇಟ್ಸ್,ರಘು ಬಿಲ್ಡಿಂಗ್, ಉರ್ವಾಸ್ಟೋರ್, ಮಂಗಳೂರು -575006  ಈ ವಿಳಾಸಕ್ಕೆ ಎಪ್ರಿಲ್ 10 ರ ಒಳಗೆವಿವರಗಳನ್ನು ಕಳುಹಿಸಬಹುದು. ಕಛೇರಿವೇಳೆಯಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:0824-4281531, 9886510087 ಮೈಲ್-hrudayavahini@rediffmail.com

Write A Comment