ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವವು ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು. ಅಸಂಖ್ಯ ಭಕ್ತರು ಜಾತ್ರೆಯ ರಥೋತ್ಸವದಲ್ಲಿ ಪಾಲ್ಘೊಂಡರು.
ರಾಮ ನವಮಿಯ ದಿನ ನಡೆಯುವ ಜಾತ್ರೆಯಲ್ಲಿ ಬೆಳಿಗ್ಗಿನಿಂದಲೇ ವೆಂಕಟರಮಣನನ್ನು ಆಭರಣ ಪುಷ್ಪಾದಿಗಳಿಂದ ಅಲಂಕರಿಸಿರುತ್ತಾರೆ. ಭಜನೆ, ಗೋವಿಂದ ನಾಮವಳಿಗಳಿಂದ ವೆಂಕಟರಮಣನನ್ನು ಸ್ತುತಿಸಲಾಗುತ್ತದೆ. ಸಂಜೆ ನಡೆದ ರಥೋತ್ಸವಕ್ಕೆ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ದೇವರಿಗೆ ಫಲಪುಷ್ಪ ಮತ್ತು ಹಣ್ಣುಕಾಯಿ ಸಮರ್ಪಣೆ ನಡೆಸುತ್ತಾರೆ.
ರಥೋತ್ಸವ ಸಂದರ್ಭದಲ್ಲಿ ಕಾಸರಗೋಡಿನ ‘ಶ್ರೀ ಶಾಸ್ತಾ’ ತಂಡದಿಂದ ಚಂಡೆವಾದನ ನೆರೆದವರನ್ನು ರಂಜಿಸಿತು.