ಮಂಗಳೂರು : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನಿಗೆ ಸುಮಾರು ಹತ್ತು ಜನರ ತಂಡವೊಂದು ಹಲ್ಲೆ ನಡೆಸಿದ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಂಗಿಪೇಟೆಯ ನಾಸೀರ್ ಎಂಬವರು ಎಂದಿನಂತೆ ಇಂದು ಕೂಡ ತನ್ನ ಕೆಲಸಕ್ಕಾಗಿ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಬರುತಿದ್ದ ಸಂದರ್ಭದಲ್ಲಿ ಬಸ್ಸ್ ಕಂಕನಾಡಿ ತಲುಪುದಿದ್ದಂತೆ, ಐದು ಬೈಕಿನಲ್ಲಿ ಬಂದ ಸುಮಾರು ಹತ್ತು ಜನರ ತಂಡವೊಂದು ನಾಸೀರ್ ನನ್ನು ಬಸ್ಸಿನಿಂದ ಎಳೆದು ದೊಣ್ಣೆ ಹಾಗೂ ಕಬ್ಬಿಣದ ಸಲಾಖೆಯಲ್ಲಿ ಮಾರಂಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾಸೀರ್ ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಲಾಗಿದೆ.
ಅದೇ ಬಸ್ಸಿನಲ್ಲಿ ನಾಸೀರ್ ಜೊತೆ ನಾಸೀರ್ ಸಮ್ಮಂದಿ ಮಲ್ಲಿಕ್ ಹಾಗೂ ಅವನ ಗೆಳೆಯ ನಿಸಾರ್ ಅಹ್ಮದ್ ಕೂಡ ಪ್ರಯಾಣಿಸುತ್ತಿದ್ದು, ಅವರ ಮೇಲೆ ಯಾವೂದೇ ರೀತಿಯ ಹಲ್ಲೆ ನಡೆದಿಲ್ಲ ಎನ್ನಲಾಗಿದೆ.
ನಾಸೀರ್ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳಲ್ಲಿ ಪುದು ನಿವಾಸಿ ಸಂದೇಶ್, ಮಾರಿಪಳ್ಳ ನಿವಾಸಿ ಭರತ್, ತುಂಬೆ ಕುಮ್ಡೇಲ್ ನಿವಾಸಿ ಮನೋಜ್ ಆಚಾರ್ಯ ಹಾಗೂ ತುಂಬೆ ಮಜಿ ನಿವಾಸಿ ಸಂತೋಷ್ ಆಚಾರಿ ಎಂಬವರನ್ನು ಗುರುತು ಹಿಡಿಯಲಾಗಿದ್ದು, ಉಳಿದ ಆರು ಮಂದಿಯನ್ನು ನೋಡಿದರೆ ಗುರುತು ಪತ್ತೆ ಹಚ್ಚ ಬಹುದು ಎಂದು ನಾಸೀರ್ ತಂದೆ ದೂರಿನಲ್ಲಿ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಸೀರ್ ತಂದೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.