ಮಂಗಳೂರು.ಎ.04 : ಕಾಪಿತಾನಿಯೊ0ದರ ಪುನರ್ವಸತಿ ಕೇಂದ್ರದಲ್ಲಿ ಕಲ್ಮಾಡಿಯ ಆಲ್ವಿನ್ ಫೆರ್ನಾಂಡಿಸ್(27) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಿಗ್ಗೆ ಆಲ್ವಿನ್ ಸ್ನಾನಕ್ಕೆ ಹೋಗಿದ್ದು, ಆತನ ದೇಹ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಯುವಕ ಆಲ್ವಿನ್ ಕಲ್ಮಾಡಿಯ ದಿವಂಗತ ಜೋಸೆಫ್ ಮತ್ತು ದಿವಂಗತ ತೆರೆಸಾ ಫೆರ್ನಾಂಡಿಸ್ರ ಪುತ್ರನಾಗಿದ್ದಾನೆ. ಆಲ್ವಿನ್ ಕೇವಲ ಇಪ್ಪತ್ತು ದಿನಗಳ ಹಿಂದೆ ಕಲ್ಮಾಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಬದುಕುಳಿದ ಆತನಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಬಿಡುಗಡೆಗೊಂಡ ಬಳಿಕ ಅವನನ್ನು ಮಂಗಳೂರಿನ ಪುನಶ್ಚೇತನ ಕೇಂದ್ರಕ್ಕೆ ಸೇರಿಸಲಾಗಿತ್ತು.
ಆಲ್ವಿನ್ ಚರ್ಚ್‌ನಲ್ಲಿ ಮುಂಚೂಣಿಯಲ್ಲಿದ್ದು, ಒಳ್ಳೆಯ ಇವೆಂಟ್ ಮ್ಯಾನೇಜರ್ ಎಂದು ಹೆಸರು ಮಾಡಿದ್ದ. ಆತ ತನ್ನ ಸಹೋದರನನ್ನು ಅಗಲಿದ್ದಾನೆ.
ಆತ್ಮಹತ್ಯ್ರೆಗೆ ಕಾರಣ ತಿಳಿದು ಬಂದಿಲ್ಲ. ಕಂಕನಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.