ಕುಂದಾಪುರ: ತಾಲೂಕಿನ ಬೀಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ರೋಷನಿಧಾಮ ಕೊರಗ ಕಾಲನಿಯಲ್ಲಿರುವ ಮನೆಯೊಂದರ ಮೇಲೆ ತೆಂಗಿನ ಮರವು ಶನಿವಾರ ಮಧ್ಯಾಹ್ನ ಉರುಳಿ ಬಿದ್ದಿದೆ.
ಘಟನೆ ನಡೆದು ಎರಡು ದಿನ ಕಳೆದರೂ ಕೂಡ ಸಂಬಂದಪಟ್ಟವರ್ಯಾರು ಈ ಮರವನ್ನು ಕಡಿದು ತೆರವು ಗೊಳಿಸುವ ಕಾರ್ಯ ಮಾಡಿಲ್ಲ. ಈಗಾಗಲೇ ಮನೆ ಮೇಲ್ಮಾಡು ಹಾನಿಯಾಗಿದ್ದು, ಹೆಂಚು, ರೀಪುಗಳು ಹಾನಿಯಾಗಿದೆ.
ಹಳೆಯ ಕಟ್ಟಡವಾದ ಕಾರಣ ಯಾವುದೇ ಸಮಯದಲ್ಲೂ ಮರದ ಒತ್ತಡಕ್ಕೆ ಮನೆಯ ಗೋಡೆಯೂ ಕುಸಿಯುವ ಭೀತಿ ಸ್ಥಳೀಯ ಕೊರಗ ನಿವಾಸಿಗಳದ್ದಾಗಿದ್ದು, ಮರ ಕಡಿಯುವವರು ಸಿಗದ ಕಾರಣ ಮಂಗಳವಾರ ತೆರವು ಗೊಳಿಸುವ ಭರವಸೆಯನ್ನು ಸ್ಥಳಿಯ ಪಂಚಾಯತ್ ತಿಳಿಸಿದೆ ಎನ್ನಲಾಗಿದೆ.