ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕನೊಬ್ಬ ಗುದದ್ವಾರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15.71 ಲಕ್ಷ ರೂ. ವೌಲ್ಯದ 583 ಗ್ರಾಂ ಚಿನ್ನವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಸಿದ್ದಾರೆ.
ಕಾಸರಗೋಡು ನಿವಾಸಿ ಸಾಬಿರ್ ಬೆರ್ಕ (19) ಎಂಬಾತ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಜೆಟ್ ಏರ್‌ವೇಸ್ ಬಂದಿಳಿದ ಸಂದರ್ಭ ಅನುಮಾನಗೊಂಡ ಕಷ್ಟಮ್ಸ್ ಅಕಾರಿಗಳು ಈತನನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಆತ ಎರಡು ಸಣ್ಣ ಬ್ಯಾರೆಲ್ ಮಾದರಿಯಲ್ಲಿ ಚಿನ್ನ ಮಾಡಿಸಿ ತನ್ನ ಗುದದ್ವಾರದಲ್ಲಿ ಇಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದ. ಆರೋಪಿಯನ್ನು ಬಂಸಿದ ಕಷ್ಟಮ್ಸ್ ಅಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.