ಮಂಗಳೂರು,ಎ.09: 20ಆಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ. ಕೆನಡಾ, ಪೊರ್ಚುಗಲ್, ಹೋಲೆಂಡ್ ಮೂಲದ ಅಂತರಾಷ್ಟ್ರೀಯ ರೌಂಡ್ ಟೇಬಲ್ ನ ಸದಸ್ಯರು ಆಟೋರಿಕ್ಷಾದ ಮೂಲಕ ತಿರುವಂತಪುರ (ಕೇರಳ) ದಿಂದ ಪಣಜಿ (ಗೋವಾ) ದವರೆಗೆ ಸಾಹಸ ಪ್ರಯಾಣವನ್ನು ತಾ 5.04.2015 ರಂದು ಪ್ರಾರಂಬಿಸಿ 9.04.2015 ರಂದು ಮಂಗಳೂರಿಗೆ ತಲುಪಿದರು.
ಅವರನ್ನು ಮಂಗಳೂರು ರೌಂಡ್ ಟೇಬಲ್ ನ ಅಧ್ಯಕ್ಷರಾದ ನವೀನ್ ಕಾರ್‌ಡೋಜಾ, ಕಾರ್ಯದರ್ಶಿಯವರಾದ ಕೆನೆಟ್ ಸೆರಾವೋ ಮತ್ತು ಲೇಡಿಸ್ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಲವ್ಲಿನ್ ಡಿಸೋಜ ಅವರು ನಗರದ ಬಿರ್ಕನಕಟ್ಟೆ ಸರಕಾರಿ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.
ಬಳಿಕ ಸದಸ್ಯರು, ಶಾಲೆಯ ಶಿಕ್ಷಕ ವೃಂದ ಮತ್ತು ವಿಧ್ಯಾರ್ಥಿಗಳೊಂದಿಗೆ ಬೆರೆತು ಶಾಲಾ ಶಿಕ್ಷಣ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಜೀವನ ಶೈಲಿ, ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಮಾಹಿತಿ ಪಡೆದರು. ತಮ್ಮ ಸಮಾಜಸೇವಾ ಚಟುವಟಿಕೆಯ ಅಂಗವಾಗಿ ಶಾಲಾ ಮಕ್ಕಳಿಗೆ ಆರ್ಥಿಕ ಸಹಾಯ ನೀಡುವ ಬಗ್ಗೆ ಆಶ್ವಾಸನೆ ನೀಡಿದರು. ಪ್ರವಾಸಿಗರು ತಮ್ಮ ಪ್ರಯಾಣ ಮತ್ತು ಭೇಟಿಯ ಬಗ್ಗೆ ಮಾತನಾಡಿ ತಾವು ಭಾರತೀಯ ಶೈಕ್ಷಣಿಕ ಸಂಸ್ಕೃತಿ ಸಂಪ್ರಾದಾಯದ ಬಗ್ಗೆ ಮಾಹಿತಿ ಅಧ್ಯಯನ ಮಾಡುವ ಮುಖ್ಯ ಉದ್ದೇಶ ಎಂದು ನುಡಿದರು. ಈ ಸಾಹಸಿ ಪ್ರಯಾಣವನ್ನು ತಿರುವನಂತಪುರದ ಅಂತರಾಷ್ಟ್ರೀಯ ಆಟೋರಿಕ್ಷಾ ಚಾಲೆಂಜ್ ಸಂಸ್ಥೆ ಪ್ರಾಯೋಜಿಸಿತ್ತು.
ಬಳಿಕ ಮಂಗಳೂರು ರೌಂಡ್ ಟೇಬಲ್ 15 ರ ಪದಾಧಿಕಾರಿಗಳು ಮತ್ತು ಸದಸ್ಯರು ಅವರನ್ನು ಮುಂದಿನ ಗೋವಾ ಪ್ರಯಾಣಕ್ಕೆ ಹಾರ್ಧಿಕವಾಗಿ ಬೀಳ್ಕೊಟ್ಟರು.