-ಡಾ. ಎಸ್.ಎಸ್. ವಾಸನ್, ಆ್ಯಂಡ್ರೊಲಜಿಸ್ಟ್
ಮಕ್ಕಳು ಬೆಳೆಯುತ್ತಿದ್ದಂತೆ ತಮ್ಮ ಸುತ್ತಲೊಂದು ಸಂಕೋಚದ ಪರದೆಯ ಗೋಡೆಯನ್ನು ಕಟ್ಟಿಕೊಳ್ಳುತ್ತಾರೆ. ಅಪ್ಪ ಅಮ್ಮನೊಂದಿಗೆ ಏನನ್ನೂ ಹಂಚಿಕೊಳ್ಳುವುದಿಲ್ಲ. ಹೇಳಿಕೊಳ್ಳುವುದಿಲ್ಲ. ಇಂಥ ಸಂದರ್ಭಗಳಲ್ಲಿ ತಮ್ಮ ಜನನಾಂಗದ ಬಗ್ಗೆಯಂತೂ ಯಾರ ಬಳಿಯೂ ಮಾತಾಡುವುದಿಲ್ಲ.
ಜನನೇಂದ್ರಿಯ ಬಗ್ಗೆ ಅವರ ಬಳಿ ಮಾತನಾಡುವುದು ಹೇಗೆ? ಗಾತ್ರದ ಬಗ್ಗೆ ಚರ್ಚಿಸಬೇಕೆ? ಕೇಳಬೇಕೆ? ಯಾವ ಸನ್ನಿವೇಶದಲ್ಲಿ ವೈದ್ಯರನ್ನು ಕಾಣಬೇಕು? ಪ್ರತಿಯೊಂದಕ್ಕೂ ತಜ್ಞರ ಸಲಹೆ ಪಡೆಯಬೇಕೆ? ಯಾವ ವಿಷಯದ ಬಗ್ಗೆ ಆತಂಕಿತರಾಗಬೇಕು? ಚಿಂತಿತರಾಗಬೇಕು? ಅಥವಾ ಬೆಳೆದಂತೆ ಸರಿಹೋಗುತ್ತದೆಯೇ?
ಸಾಮಾನ್ಯವಾಗಿ ಶಿಶ್ನದ ಗಾತ್ರವನ್ನು ಅಳೆಯುವಾಗಲೆಲ್ಲ ಮೇಲ್ಭಾಗದಿಂದ ಅಳೆದು ನೋಡಬೇಕು. ಆದರೆ ಬಹುತೇಕ ಜನರು ಕೆಳಭಾಗದಿಂದ ತುದಿಯವರೆಗೂ ಅಳೆಯಬೇಕೆಂದೇ ಅಂದುಕೊಂಡಿದ್ದಾರೆ. ಒಂದು ವೇಳೆ ಕೆಳಭಾಗದಿಂದ ಅಳೆದರೆ, ಉದ್ರೇಕದ ಸಮಯದಲ್ಲಿ ಶಿಶ್ನದ ಉದ್ದವನ್ನು ಅರಿಯಲಾಗದು. ಶಿಶ್ನದ ಉದ್ದವನ್ನು ಅಳೆಯಬೇಕೆಂದರೆ ಶಿಶ್ನದ ತುದಿಯಿಂದ, ಜನನಾಂಗವು ದೇಹಕ್ಕೆ ಅಂಟಿಕೊಂಡಿರುವವರೆಗೂ ಅಳತೆ ಮಾಡಬೇಕು. ಅದು ನಿಮ್ಮ ಜನನಾಂಗದ ಉದ್ದವಾಗಿರುತ್ತದೆ.
ಜನನಾಂಗದ ಸರಾಸರಿ ಗಾತ್ರ
ಯಾರೂ ಒಂದೇ ಸಮವಾಗಿ ಬೆಳೆಯುವುದಿಲ್ಲ. ಎಲ್ಲರೂ ಭಿನ್ನವಾಗಿ ಬೆಳೆಯುವಂತೆ ಅವರವರ ಜನನಾಂಗದ ಗಾತ್ರವೂ ಬದಲಾಗಿರುತ್ತದೆ. ಮಕ್ಕಳ ಬೆಳವಣಿಗೆ ಬೇರೆ ಬೇರೆ ಹಂತಗಳಲ್ಲಿ ವಿಭಿನ್ನವಾಗಿರುತ್ತದೆ ಎಂಬುದು ಗಮನಾರ್ಹ. ಪ್ರೌಢಾವಸ್ಥೆಗೆ ಕಾಲಿಟ್ಟ ಪುರುಷರ ಶಿಶ್ನದ ಗಾತ್ರವು 14–16ಸೆಂ.ಮೀ ಉದ್ದವಾಗಿರುತ್ತದೆ. ಹದಿಹರೆಯದವರಲ್ಲಿ 12–13 ಸೆಂ.ಮೀ. ಉದ್ದವಾಗಿರಬಹುದು. ಇದು ಉದ್ರೇಕಗೊಂಡಾಗ ಎಂಬುದು ನೆನಪಿನಲ್ಲಿರಲಿ.
ಉದ್ರೇಕಗೊಂಡಾಗ ಶಿಶ್ನದ ಉದ್ದ 3 ಇಂಚುಗಳಷ್ಟು ಮಾತ್ರ ಉದ್ದವಾಗಿದ್ದರೆ ಅದನ್ನು ಚಿಕ್ಕಗಾತ್ರದ ಶಿಶ್ನವೆಂದು ಕರೆಯುತ್ತಾರೆ. ಈ ಗಾತ್ರವನ್ನು ಸರಾಸರಿ ಗಾತ್ರವೆಂದು ನಿರ್ಣಯಿಸಲು 1942ರಿಂದಲೂ ವಿವಿಧ ಅಧ್ಯಯನ ಕೈಗೊಳ್ಳಲಾಗಿದೆ. 50 ಅಧ್ಯಯನಗಳನ್ನು ಆಧರಿಸಿ ಸರಾಸರಿ ಗಾತ್ರವನ್ನು ನಿರ್ಧರಿಸಲಾಗಿದೆ. ಪ್ರೊ.ಕೆವನ್ ವೈಲ್ ಎಂಬ ಲೈಂಗಿಕ ತಜ್ಞರು ಈ ನಿರ್ಣಯಕ್ಕೆ ಬರಲು 11531 ಜನರ ಜನನಾಂಗಗಳನ್ನು ಅಳತೆ ಮಾಡಿದ್ದರು.
ಕೆಲವೊಮ್ಮೆ ಉದ್ರೇಕಗೊಂಡಾಗ ಒಂದಷ್ಟು ಜನರಿಗೆ ಮೇಲ್ಮುಖವಾಗಿರುತ್ತದೆ. ಕೆಲವೊಬ್ಬರಿಗೆ ಕೆಳಮುಖ ವಾಗಿದ್ದರೆ, ಇನ್ನೂ ಕೆಲವರಿಗೆ ಲಂಬವಾಗಿರುತ್ತದೆ. ಇನ್ನೂ ಕೆಲವರಿಗೆ ಎಡಕ್ಕೋ ಅಥವಾ ಬಲಕ್ಕೋ ವಾಲಿಕೊಂಡಂತೆ ಇರುತ್ತದೆ. ಯಾವುದೇ ಬಗೆಯ ನಿರ್ದಿಷ್ಟ ಉದ್ರೇಕವನ್ನು ಹೆಸರಿಸಲಾಗುವುದಿಲ್ಲ. ಒಂದು ವೇಳೆ ಶಿಶ್ನವು 30ಡಿಗ್ರಿಯಷ್ಟು ಬಾಗಿದ್ದರೆ ಅದು ಮಿಲನದ ವೇಳೆ ಘಾಸಿಗೊಳ್ಳಬಹುದು. ಅಥವಾ ಲೈಂಗಿಕ ಜೀವನವು ಸರಳವಾಗಿರುವುದಿಲ್ಲ. ಇಷ್ಟು ಬಾಗುವಿಕೆ ಇದ್ದಲ್ಲಿ ಯುರೊ ಆ್ಯಂಡ್ರೊಲಜಿಸ್ಟ್ ಸಲಹೆ ತೆಗೆದುಕೊಳ್ಳುವುದು ಒಳಿತು.
ಪ್ರತಿಯೊಬ್ಬ ಬಾಲಕನೂ ವಿಭಿನ್ನವಾಗಿ ಬೆಳೆಯುತ್ತಾನೆ. ಪ್ರೌಢಾವಸ್ಥೆಯಲ್ಲಿ 11–18ನೇ ವಯಸ್ಸಿನಲ್ಲಿ ಅತಿಶೀಘ್ರ ಬೆಳವಣಿಗೆ ಕಾಣಬಹುದು. ಆದರೆ 20ನೇ ವರ್ಷದವರೆಗೂ ಜನನಾಂಗ ಬೆಳೆಯುತ್ತದೆ ಎನ್ನುವುದೂ ಗಮನಾರ್ಹವಾಗಿದೆ.
ಈ ಲೈಂಗಿಕ ಹಾಗೂ ಭೌತಿಕಬದಲಾವಣೆಗಳು ಪ್ರೌಢಾವಸ್ಥೆಯಲ್ಲಿ ವಿವಿಧ ಹಂತದಲ್ಲಿ ಕಂಡು ಬರುತ್ತದೆ. ಹುಡುಗರಲ್ಲಿ ಅವರು ಪ್ರೌಢಹಂತವನ್ನು ಯಾವಾಗ ತಲುಪಿದರು ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟಕರ. ಅವರಲ್ಲಿ ಹಲವಾರು ಬದಲಾವಣೆಗಳು ಕಂಡು ಬರುತ್ತವೆ.
ಆದರೆ ಈ ಎಲ್ಲ ಬದಲಾವಣೆಗಳೂ ನಿಧಾನವಾಗಿ ಕಂಡು ಬರುತ್ತವೆ. ಒಂದೆರಡು ದಿನಗಳಲ್ಲಿ ಜರುಗುವ ಪ್ರಕ್ರಿಯೆ ಇದಲ್ಲ. ಕಿಶೋರಾವಸ್ಥೆಯಿಂದ ಮಕ್ಕಳು ಪ್ರೌಢಾವಸ್ಥೆಗೆ ತಲುಪುವ ವೇಳಾಪಟ್ಟಿಯನ್ನು ನಿರ್ದಿಷ್ಟವಾಗಿ ಅಥವಾ ನಿಖರವಾಗಿ ಹೇಳಲಾಗದು. ಆದರೆ ಪ್ರೌಢಾವಸ್ಥೆಗೆ ತಲುಪುವ ವಯಸ್ಸಿನ ವಿವಿಧ ಮಜಲುಗಳನ್ನು ಸರಾಸರಿ ವಯಸ್ಸೆಂದು ಹೇಳಬಹುದಾಗಿದೆ.
ಪ್ರೌಢಾವಸ್ಥೆಯ ಆರಂಭ: 9.5ರಿಂದ 14 ವರ್ಷ
ಮೊದಲ ಹಂತ: ವೃಷಣಗಳ ಬೆಳವಣಿಗೆ
ಶಿಶ್ನದ ಬೆಳವಣಿಗೆ: ವೃಷಣಗಳ ಬೆಳವಣಿಗೆ ಪೂರ್ಣಗೊಂಡ ನಂತರದ ಒಂದು ವರ್ಷದಲ್ಲಿ ಜನನಾಂಗದ ಬೆಳವಣಿಗೆಯಾಗುತ್ತದೆ.
ಜನನಾಂಗದ ಬಳಿ ಕೂದಲಿನ ಬೆಳವಣಿಗೆ: 13.5 ವರ್ಷ.
ಸ್ವಪ್ನ ಸ್ಖಲನ: 14 ವರ್ಷ
ಕಂಕುಳದಲ್ಲಿ ಕೂದಲು, ಮೀಸೆ, ಧ್ವನಿ ಒಡೆಯುವುದು: ಇದೆಲ್ಲವೂ 15 ವರ್ಷಗಳ ನಂತರ ವೃಷಣಗಳ ಗಾತ್ರ ಇಮ್ಮಡಿಯಾಗುವುದು, ಸ್ವಪ್ನ ಸ್ಖಲನ ಉಂಟಾಗುವುದು ಪ್ರೌಢಾವಸ್ಥೆ ಪೂರ್ಣಗೊಂಡ ಲಕ್ಷಣವಾಗಿದೆ. ಕೆಲವು ಹುಡುಗರಿಗೆ ಇದು 13 ವರ್ಷದಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರಿಗೆ 18ರ ನಂತರವೂ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಮಗನ ಬೆಳವಣಿಗೆಯ ಬಗ್ಗೆ ಆತಂಕಗಳಿದ್ದರೆ ಕೂಡಲೇ ವೈದ್ಯರ ಬಳಿ ಸಮಾಲೋಚಿಸುವುದು ಒಳಿತು. ಉದ್ರೇಕವಿದ್ದಾಗ ಮತ್ತು ಇಲ್ಲದಿದ್ದಾಗ ಸಹಜ ಸ್ಥಿತಿಯಲ್ಲಿ ಶಿಶ್ನದ ಉದ್ದ ಎಷ್ಟಿರಬಹುದು?
ಮನುಷ್ಯರ ಅಂಗೈ ಅಂಗಾಲುಗಳಂತೆಯೇ ಜನನಾಂಗದ ಗಾತ್ರವೂ ವಿಭಿನ್ನವಾಗಿರುತ್ತವೆ. ಒಂದು ವೇಳೆ ಸಹಜ ಸ್ಥಿತಿಯಲ್ಲಿದ್ದರೆ ಅದು 1ರಿಂದ4 ಇಂಚು ಉದ್ದವಿರುತ್ತದೆ. ಉದ್ರೇಕಗೊಂಡಾಗ 5ರಿಂದ 7 ಇಂಚುಗಳಷ್ಟು ದೊಡ್ಡದಾಗಿರುತ್ತವೆ. ಈ ಸರಾಸರಿಗಳ ನಡುವೆ ಬರುವ ಯಾವುದೇ ಗಾತ್ರದ ಜನನಾಂಗವು ತನ್ನ ಮೂಲ ಕಾರ್ಯವನ್ನು ನಿರ್ವಹಿಸಲು ಸೂಕ್ತವಾಗಿರುತ್ತದೆ. ಲೈಂಗಿಕ ಕ್ರಿಯೆ ಹಾಗೂ ಸಂತಾನೋತ್ಪತ್ತಿಗೆ ಸಮರ್ಪಕವಾಗಿರುತ್ತದೆ.
ನಿಧಾನಗತಿಯ ಬೆಳವಣಿಗೆ
ನಿಮ್ಮ ಮಗುವಿನ ದೈಹಿಕ ಬದಲಾವಣೆಗಳನ್ನು ಗುರುತಿಸುತ್ತಲೇ ಇರುತ್ತೀರಿ. ಕೆಲವೊಮ್ಮೆ ಬೆಳವಣಿಗೆ ನಿಧಾನಗತಿಯಲ್ಲಿದೆ ಎನಿಸಬಹುದು. ಒಂದು 8ರಿಂದ 10 ವರ್ಷ ವಯಸ್ಸಿನವರಿದ್ದಾಗ ಮಕ್ಕಳನ್ನು ವೈದ್ಯರ ಬಳಿ ಅವರ ಬೆಳವಣಿಗೆಯ ಮೌಲ್ಯಮಾಪನ ಮಾಡಿಸಬಹುದು. ಅಗತ್ಯವಿದ್ದಲ್ಲಿ ಹಾರ್ಮೋನಿನ ಚಿಕಿತ್ಸೆ ನೀಡಬಹುದು. ಸಮಸ್ಯೆಯ ಆರಂಭದಲ್ಲಿಯೇ ಚಿಕಿತ್ಸೆಯನ್ನೂ ಆರಂಭಿಸಿದರೆ ಫಲಿತಾಂಶ ಪರಿಣಾಮಕಾರಿಯಾಗಿರುತ್ತದೆ.
ಮಾಹಿತಿಗೆ: 9611394477
info@manipalankur.com