ಕನ್ನಡ ವಾರ್ತೆಗಳು

ನಂಬಿಕೆ ವಿಶ್ವಾಸ ಇದಲ್ಲಿ ಮಾತ್ರ ಪರಲೋಕದಲ್ಲಿ ವಿಜಯಿಯಾಗಬಹುದು : ಯಾಸೀನ್ ಚೌಹರಿ ಮದನಿ ಕೊಲ್ಲಂ

Pinterest LinkedIn Tumblr

yaseen_uroors_photo_1

ಉಳ್ಳಾಲ: ನಮಾಝ್ ಇಸ್ಲಾಂನ ಮಹತ್ವಪೂರ್ಣ ಆರಾಧನೆಯಾಗಿದೆ. ಇಸ್ಲಾಂನ ಕಡ್ಡಾಯ ಕಾರ್ಯವಾಗಿರುವ ನಮಾಝ್‌ನ್ನು ಮುಸ್ಲಿಂ ಸಮುದಾಯ ನಿರ್ವಹಿಸಿಕೊಂಡು ಬರಬೇಕು. ಅದೇ ರೀತಿರಂಝಾನ್ ತಿಂಗಳಲ್ಲಿ ಬರುವ ಉಪವಾಸವನ್ನು ಮುಸ್ಲಿಮರು ಇಷ್ಟಪಡಬೇಕು. ಇದರಲ್ಲಿ ನಂಬಿಕೆ ವಿಶ್ವಾಸ ಇದಲ್ಲಿ ಮಾತ್ರ ಪರಲೋಕದಲ್ಲಿ ವಿಜಯಿಯಾಗಬಹುದು ಎಂದು ಯಾಸೀನ್ ಚೌಹರಿ ಮದನಿ ಕೊಲ್ಲಂ ಹೇಳಿದರು. ಅವರು ಬುಧವಾರ ಉಳ್ಳಾಲ ಉರೂಸ್‌ನ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇಸ್ಲಾಂನ ಯಾವುದೇ ಕಾರ್ಯಗಳು ಇರಲಿ, ಅದು ಇಸ್ಲಾಂನ ಚೌಕಟ್ಟು ಮೀರದೇ ನಡೆಯಬೇಕು. ಒಂದು ವೇಳೆ ಚೌಕಟ್ಟು ಮೀರಿ ಕಾರ್ಯಗಳು ನಡೆದರೆ ಅತಂತ್ರವಾಗುತ್ತದೆ. ಸಮಾಜದಲ್ಲಿ ಸಮಸ್ಯೆಗಳೇ ನಿರ್ಮಾಣವಾಗುತ್ತದೆ. ನಾವು ಅದಕ್ಕೆ ಅವಕಾಶ ಮಾಡಿಕೊಡಬಾರದು. ಉಲೇಮಾ ಸಾದಾತುಗಳನ್ನು ಅವಹೇಳನ ಮಾಡುವುದು, ಮದ್ಯಪಾನ ಮಾಡುವುದು, ಅತ್ಯಾಚಾರ, ಮಾನಸಿಕ ಕಿರುಕುಳ ಇವೆಲ್ಲ ಇಸ್ಲಾಂ ವಿರೋಧಿ ಕಾರ್ಯಗಳಾಗವೆ ಎಂದರು.

yaseen_uroors_photo_2

ಅಹ್ಮದ್ ಬಾವಾ ಮುಸ್ಲಿಯಾರ್ ದುವಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾಝಿ ಫಝಲ್ ಕೋಯಮ್ಮ ತಂಙಳ್ ಮದನಿ ವಹಿಸಿದ್ದರು ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಅತಿಥಿಗಳನ್ನು ಸ್ವಾಗತಿಸಿದರು.ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಮುಖ್ಯ ಭಾಷಣ ಮಾಡಿದರು.

ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನ ಪ್ರೊಫೆಸರ್ ಚೆರುಕುಂಞಿ ತಂಙಳ್,ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ರವೂಫ್ ಮುಸ್ಲಿಯಾರ್,ಅಬ್ದುಲ್ ರಶೀದ್ ಮದನಿ,ಬಿ.ಎಂ. ಮುಹಮ್ಮದ್ ರಫೀಖ್ ಸಖಾಫಿ, ಅಶ್ರಫ್ ಸ‌ಅದಿ, ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್,ಸುಲೈಮಾನ್ ಸಖಾಫಿ, ಹನೀಫ್ ಮಾರ್ಗತಲೆ, ಪೇಟೆ ಮಸೀದಿಯ ಅಧ್ಯಕ್ಷ ಹಾಜಿ ಮೊಯ್ದಿನ್ ಹಸನ್ ಪೇಟೆ, ಕಾರ್ಯದರ್ಶಿ ಮುಸ್ತಫಾ ಅಹ್ಮದ್, ಶಂಶುದ್ದೀನ್ ಮಿಲ್ಲತ್‌ನಗರ, ಫಾರೂಕ್ ಮಾರ್ಗತಲೆ, ಇಬ್ರಾಹಿಂ ಖಲೀಲ್ ಮಿಲ್ಲತ್ ನಗರ, ಶಮೀರ್ ಕೊಲ್ಲಂ ಖಾದಿಸಿಯ್ಯ, ಯು.ಬಿ.ಯೂಸುಫ್ ಪೇಟೆ,ಇಬ್ರಾಹಿಂ ಅಕ್ಕರೆಕರೆ, ನಾಝಿಂ ಮುಕಚೇರಿ, ಹನೀಫ್ ಹಾಜಿ, ಇಬ್ರಾಹಿಂ ಅಹ್ಸನಿ, ಕಲಾಂ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

Write A Comment