ಮಂಗಳೂರು, ಎ.21: ಲೇಖಕ ಚೆನ್ನಮಲ್ಲಪ್ಪ ಪಾಟೀಲ್ ರೊಡ್ನಡ್ಗಿ ಕನ್ನಡದಲ್ಲಿ ಅನುವಾದಿಸಿದ ‘ಮೈನುನಾ ಬೇಗಂ ಅರ್ಥಾತ್ ಇಂದಿರಾ ಗಾಂಧಿ’ ಕೃತಿ ಬಿಡುಗಡೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆಯಿತು.
ಕೃತಿ ಬಿಡುಗಡೆಗೊಳಿಸಿದ ಬೆಂಗಳೂರಿನ ಆಚಾರ್ಯ ಶ್ರೀಗುರುಪ್ರಕಾಶ್ ಗುರೂಜಿ ಮಾತನಾಡಿ, ಸನಾತನ ಹಿಂದೂ ಧರ್ಮಕ್ಕೆ ಧಕ್ಕೆಯಾಗುವಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವರ್ತಿಸಿರುವುದು ಕೃತಿಯಲ್ಲಿ ಬಹಿರಂಗಗೊಂಡಿದೆ ಎಂದರು.
ಹಿಂದೂ ಮಹಾಸಭಾ ವಕ್ತಾರ ಧರ್ಮೇಂದ್ರ ಕೃತಿ ಬಗ್ಗೆ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಾನು ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡಿರುವ ವಿಚಾರವನ್ನು ಮರೆಮಾಚಿರುವುದು ಕೃತಿಯಲ್ಲಿ ಸವಿವರವಾಗಿ ತಿಳಿಸಲಾಗಿದೆ ಎಂದರು.
ಶ್ರೀರಾಮ ಸೇನೆ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕುಮಾರ್ ಮಾಲೆಮಾರ್, ಪ್ರಕಾಶಕ ಕೆ.ರವಿಚಂದ್ರರಾವ್ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ವಕೀಲರಾದ ಆರ್.ವಿ.ಬಾಷಿನ್ ಇಂಗ್ಲಿಷ್‌ನಲ್ಲಿ ಮೂಲ ಕೃತಿ ರಚಿಸಿದ್ದು, ಹಿಂದಿಯಲ್ಲಿ ಎಸ್.ಎನ್.ಗುರು ಉರ್ ಪ್ರಮೋದ್ ಅನುವಾದಿಸಿದ್ದರು. ಕನ್ನಡದ ಅನುವಾದಿತ ಕೃತಿಯನ್ನು ಚಿತ್ತಾ ಪಬ್ಲಿಕೇಶನ್ ಪ್ರಕಾಶಿಸಿದೆ.