ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ ಪೊಲೀಸ್ ಠಾಣೆಗಳಿಗೆ  ಐಎಸ್‌ಒ ಮಾನ್ಯತೆ ಪತ್ರ:   ಡಾ.ಶರಣಪ್ಪ

Pinterest LinkedIn Tumblr

ISO_letter_police

ಮಂಗಳೂರು, ಮೇ 04: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ವೃತ್ತಿಪರ ಮತ್ತು ಜನಸ್ನೇಹಿಗೊಳಿಸುವ ದೃಷ್ಟಿಯಿಂದ ಐಎಸ್‌ಒ ಮಾನ್ಯತೆ ಪ್ರಮಾಣ ಪತ್ರ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಹೇಳಿದ್ದಾರೆ.ರವಿವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಬಂಟ್ವಾಳ ಉಪ ವಿಭಾಗದ ಆರು ಪೊಲೀಸ್ ಠಾಣೆ, ಎರಡು ವೃತ್ತ ಕಚೇರಿ ಮತ್ತು ಪುತ್ತೂರು ವಿಭಾಗದ ಎರಡು ಠಾಣೆ, ಸುಳ್ಯ ವೃತ್ತ ಕಚೇರಿ ಹಾಗೂ ಕಡಬ ಠಾಣೆಗಳಿಗೆ ಐಎಸ್‌ಒ ಮಾನ್ಯತೆ ಪಡೆಯಲು ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 2 ಹಂತಗಳಲ್ಲಿ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ತಿಂಗಳೊಳಗೆ ಮಾನ್ಯತೆ ಲಭಿಸಲಿದೆ ಎಂದರು.

ಠಾಣೆಯ ಸ್ಥಿತಿಗತಿ, ನಿರ್ವಹಣೆ, ಪ್ರಕರಣಗಳ ವಿಲೇವಾರಿ, ವಶಪಡಿಸಿ ಕೊಂಡ ಸೊತ್ತುಗಳ ನಿರ್ವಹಣೆ, ತನಿ ಖೆಯ ಪ್ರಗತಿ ಸಹಿತ ಅನೇಕ ವಿಷಯ ಗಳಿಗೆ ಸಂಬಂಧಿಸಿ ಮಾನ್ಯತೆ ಲಭಿಸಲಿದೆ ಎಂದ ಅವರು, ಕಳೆದೊಂದು ವರ್ಷದಿಂದ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಪೊಲೀಸರ ದಕ್ಷತೆ ಇನ್ನಷ್ಟು ಹೆಚ್ಚಲಿದೆ. ಸಾರ್ವಜನಿಕರಿಗೆ ಪೊಲೀಸರ ಕಾರ್ಯದಕ್ಷತೆ ಬಗ್ಗೆ ಮನ ದಟ್ಟಾಗಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.

3ನೆ ರವಿವಾರ ನೊಂದವರ ದಿನ: ದ.ಕ. ಜಿಲ್ಲೆಯ ಪ್ರತಿ ಠಾಣೆಯಲ್ಲಿ 3ನೆ ರವಿವಾರ ವನ್ನು ನೊಂದವರ ದಿನವನ್ನಾಗಿ ಘೋಷಿಸಲಾಗಿದೆ. ಅಂದು ದೂರು ನೀಡಿದ ಪ್ರತಿಯೊಬ್ಬರಿಗೆ ಪ್ರಕರಣದ ಹಂತವನ್ನು ತಿಳಿಸಲಾಗುವುದು. ದೂರು ನೀಡಿದವರು ಪೊಲೀಸ್ ಠಾಣೆಯಲ್ಲಿ ಹಾಜರಾಗಿ ತಾವು ನೀಡಿದ ದೂರಿನ ವಿಚಾರಣೆ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಬಹುದು ಎಂದು ಜಿಲ್ಲಾ ಎಸ್ಪಿ ತಿಳಿಸಿದರು.

Write A Comment