ಕನ್ನಡ ವಾರ್ತೆಗಳು

ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರಿಗೆ ಬಲೆ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ

Pinterest LinkedIn Tumblr

ganesh_karnik_award

ಬೆಂಗಳೂರು,ಮೇ.06:  ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಸಜ್ಜನ ರಾಜಕಾರಣಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ಬೆಂಗಳೂರಿನ ಇಂಡಿಯನ್ ಸೈಯನ್ಸ್ ಮೆಂಟರ್ ಸಂಸ್ಥೆಯು ಕೊಡ ಮಾಡುವ ಬಲೆ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೌಲ್ಯಾಧಾರಿತ ಶಿಕ್ಷಣ, ಶಾಸ್ತ್ರೀಯ ಸಂಗೀತ ಹಾಗೂ ಪರಿಸರ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಯುವ ಜನತೆಯಲ್ಲಿ ಜಾಗೃತಿಯುಂಟು ಮಾಡುವಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಸಾಲಿನ ಬಲೆ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆಯವರು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.

ಈ ಸಾಲಿನ ಈ ಪ್ರಶಸ್ತಿಯನ್ನು ಪಡೆದ ಇತರರು ಶ್ರೀ ಅಬ್ದುಲ್ ಅಜೀಮ್, (ಕಾನೂನು ಹಾಗೂ ಶಿಸ್ತು ಪಾಲನೆ,) ಶ್ರೀ ಕುರುಬೂರು ಶಾಂತಕುಮಾರ್, (ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಆಳವಡಿಕೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಿಕೆ), ಶ್ರೀ ರಾಜೇಂದರ್ ಅಶೋಕ್ ಆನಂದ್, (ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಜಾಗೃತಿಗೊಳಿಸುವಿಕೆ), ಡಾ. ವೂಡೆ ಪಿ ಕೃಷ್ಣ, (ಶಿಕ್ಷಣ ಹಾಗೂ ಸಮಾಜ ಸೇವೆ).

Write A Comment