ಮೂಲ್ಕಿ,ಮೇ.06:ಪ್ರತಿಭಾವಂತರಿಗೆ ಉತ್ತಮ ವೇದಿಕೆ ನೀಡಿದಾಗ ಸಾಧಕರು ಬೆಳಕಿಗೆ ಬರುತ್ತಾರೆ, ಕೌಶಲ್ಯಕರ್ಮಿಗಳಾದ ವಿಶ್ವಕರ್ಮ ಸಮಾಜವು ತಮ್ಮ ಪಾರಂಪರಿಕ ಕೌಶಲ್ಯವನ್ನು ಮುಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಮೂಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತರು ಹೇಳಿದರು.ಹಳೆಯಂಗಡಿ ಬಳಿಯ ಪಡುಪಣಂಬೂರು ಶ್ರಿ ನಾಲ್ಕೂರು ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಪಡುಪಣಂಬೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ ವಿತರಿಸಿದರು.
ಭುಜಂಗ ಆಚಾರ್ಯ, ಕಿನ್ನಿಗೋಳಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ, ಉದ್ಯಮಿ ಬಿ. ಸೂರ್ಯಕುಮಾರ್, ಕೃಷ್ಣ ಆಚಾರ್ಯ, ಮಹಿಳಾ ವಿಭಾಗದ ಸತ್ಯಾವತಿ ವಿ. ಆಚಾರ್ಯ, ರಾಜೇಶ್ವರೀ, ಗೀತಾ ಜನಾರ್ಧನ ಆಚಾರ್ಯ ಉಡುಪಿ, ಪಡುಪಣಂಬೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಆಚಾರ್ಯ. ಜಗದೀಶ್ ಆಚಾರ್ಯ ಹಾಜರಿದ್ದರು.